ಕಡಬ:ಬ್ಯಾಂಕ್ ಸಿಬ್ಬಂದಿಯೊಬ್ಬರು ದಲಿತ ಮುಖಂಡರಿಗೆ ಲಕ್ಷ ರೂ ಹಣ ನೀಡಿದ ಅರೋಪದ ಹಿನ್ನಲೆ, ಪೊಲೀಸ್ ಠಾಣೆ ಎದುರು ಜಮಾಯಿಸಿದ ದಲಿತ ಮುಖಂಡರು

ಕಡಬ:ಬ್ಯಾಂಕ್ ಸಿಬ್ಬಂದಿಯೊಬ್ಬರು ದಲಿತ ಮುಖಂಡರಿಗೆ ಲಕ್ಷ ರೂ ಹಣ ನೀಡಿದ ಅರೋಪದ ಹಿನ್ನಲೆ,  ಪೊಲೀಸ್ ಠಾಣೆ ಎದುರು  ಜಮಾಯಿಸಿದ ದಲಿತ ಮುಖಂಡರು

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಬ್ಯಾಂಕ್ ಸಿಬ್ಬಂದಿಯೊಬ್ಬರು ದಲಿತ ಮುಖಂಡರಿಗೆ ಲಕ್ಷ ರೂ ಮೊತ್ತ ನೀಡಿರುವ ಕುರಿತ ಆರೋಪದ ಹಿನ್ನೆಲೆ ಪೊಲೀಸರು ತನಿಖೆ ವಿಳಂಬ ಮಾಡುತ್ತಿದ್ದಾರೆಂದು ತಿಳಿದು ಆದಿತ್ಯವಾರ ಠಾಣಾ ಮುಂಭಾಗದಲ್ಲಿ ಮಧ್ಯಾಹ ದೀಢಿರ್ ಆಗಿ ದಲಿತ ಮುಖಂಡರು ಜಮಾಯಿಸಿದ್ದಾರೆ

 

ಬ್ಯಾಂಕ್ ವ್ಯವಹಾರಕ್ಕೂ ದಲಿತ ಮುಖಂಡರಿಗೆ ಹಣ ನೀಡುವ ಆರೋಪವೂ ಗೊಂದಲವಾಗಿದ್ದು ಸೂಕ್ತ ತನಿಖೆ ನಡೆಸದಿದ್ದಲ್ಲಿ ಇಲ್ಲೇ ಠಿಕಾಣಿ ಹೂಡುವುದಾಗಿ ದಲಿತ ಮುಖಂಡರು ಎಚ್ಚರಿಸಿದರು. ದಲಿತ ಮುಖಂಡರು ಆಗಮಿಸಿದನ್ನು ಮನಗಂಡು ಎ.ಎಸ್.ಐ ರವಿ ಮತ್ತು ಚಂದ್ರ ಶೇಖರ ಅವರು ಮುಖಂಡರ ಮಾತುಗಳನ್ನು ಆಲಿಸಿದರು. ಬಳಿಕ ನ್ಯಾಯ ಸಮ್ಮತವಾಗಿಯೇ ಅರೋಪ ಮಾಡಿರುವ ಮಹಿಳೆಯನ್ನು ವಿಚಾರಿಸಲಾಗಿದೆ,ಅಲ್ಲದೆ ಇಲ್ಲಿನ ದಲಿತ ಮುಖಂಡರನ್ನೂ ಕರೆಸಿ ಮಾತುಕತೆ ನಡೆಸಲಾಗಿದೆ ಎಂದರು.

ಪ್ರತ್ಯುತ್ತರವಾಗಿ ಮಾತನಾಡಿದ ದಲಿತ ಮುಖಂಡರು ಇದೊಂದು ಗಂಭೀರ ಆರೋಪವಾಗಿದ್ದು ಆರೋಪ ಮಾಡಿರುವ ಮಹಿಳೆಯನ್ನು ಮತ್ತೆ ಠಾಣೆಗೆ ಕರೆಸಿ ಯಾವ ದಲಿತ ಮುಖಂಡರು ಹಣ ಪಡೆದಿದ್ದಾರೆ ಎಂದು ಸ್ಪಷ್ಟ ಪಡಿಸಬೇಕು,ಹಣ ಪಡೆದಿರುವ ಯುವತಿಯನ್ನೂ ಕರೆಸಿ ಆರೋಪಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕೆಂದು ಪಟ್ಟು ಹಿಡಿದರು. ಬಳಿಕ ಪೊಲೀಸರು  ಆರೋಪ ಮಾಡಿರುವ ಮಹಿಳೆಯ ಮನೆಗೆ   ಸೋಮವಾರ ತೆರಳಿ ಮತ್ತೆ ಸೂಕ್ತ ರೀತಿಯಲ್ಲಿ ವಿಚಾರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ,ಜಿಲ್ಲಾ ಸಂಘಟನಾ ಸಂಚಾಲಕ ಸದಾಶಿವ ಊರ್ವ ಸ್ಟೋರ್,ಕಡಬ ದಲಿತ ಸಂಘರ್ಷ ಸಮಿತಿಯ ಸಂಚಾಲಕ ವಸಂತ ಕುಬುಲಾಡಿ, ಮಹಿಳಾ ಘಟಕದ ಅಧ್ಯಕ್ಷೆ ಸುಂದರಿ ಕಲ್ಲು ಗುಡ್ಡೆ, ದಲಿತ ಮುಖಂಡರುಗಳಾದ ಗುರುವಪ್ಪ, ಲಕ್ಷ್ಮೀ ಸುಬ್ರಹ್ಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

970×90