ಸುಬ್ರಹ್ಮಣ್ಯ: ಕುಮಾರಧಾರ ಹಳೆ ಸೇತುವೆಯಲ್ಲಿ ಸಿಲುಕಿಕೊಂಡಿದ್ದ ಮರದ ತುಂಡುಗಳು, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನೇತೃತ್ವದಲ್ಲಿ ತೆರವು

ಸುಬ್ರಹ್ಮಣ್ಯ:  ಕುಮಾರಧಾರ ಹಳೆ ಸೇತುವೆಯಲ್ಲಿ ಸಿಲುಕಿಕೊಂಡಿದ್ದ  ಮರದ ತುಂಡುಗಳು, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನೇತೃತ್ವದಲ್ಲಿ  ತೆರವು

ಕಡಬ ಟೈಮ್ಸ್ ಸುಬ್ರಹ್ಮಣ್ಯ: ಕುಮಾರಧಾರ ಹಳೆ ಸೇತುವೆ ಕೆಳಭಾಗದಲ್ಲಿ ನೀರಿನ ಹರಿಯುವಿಕೆಗೆ ಅಡ್ಡವಾಗಿದ್ದ ಮರ ,ಬಿದಿರುಗಳ ತುಂಡುಗಳನ್ನು ಕಡಬ ತಾಲೂಕು ಕಂದಾಯ ಅಧಿಕಾರಿ ಅವಿನ್ ರಂಗತ್ತಮಲೆ ನೇತೃತ್ವದಲ್ಲಿ ಶನಿವಾರ ತೆರವುಗೊಳಿಸಲಾಯಿತು..

ಕುಮಾರ ಪರ್ತವ ತಪ್ಪಲಿನಲ್ಲಿ ಭಾರೀ ಮಳೆಯಾಗಿದ್ದು ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ನದಿ ಮೇಲ್ಬಾಗದಿಂದ ಘನ ಗಾತ್ರದ ಮರಗಳು ಬಂದು ಸೇತುವೆ ಯಲ್ಲಿ ಸಿಲುಕಿ ನೀರಿನ ಹರಿವಿಗೆ ತೊಂದರೆಯಾಗುತ್ತಿತ್ತು.

ಕಂದಾಯ ಅಧಿಕಾರಿಯ ಜೊತೆಗೆ ಗ್ರಾಮ ಲೆಕ್ಕಿಗ ರಂಜನ್ ಸಹಕರಿಸಿದ್ದಾರೆ.ಅಲ್ಲದೆ ಸೇತುವೆ ಕೆಳಭಾಗದಲ್ಲಿ ನೀರಿನ ಹರಿವಿಗೆ ತಡೆ ಉಂಟಾಗದಂತೆ ನಿಗಾ ವಹಿಸಲಾಗುತ್ತಿದೆ ಎಂದು ಕಂದಾಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

970×90