ಕುಕ್ಕೆ ಸುಬ್ರಹ್ಮಣ್ಯ ದೇಗುಲದಿಂದ  ಅಗ್ನಿಶಾಮಕ ದಳಕ್ಕೆ  ಮೋಟಾರ್ ಚಾಲಿತ ಬೋಟ್ ಕೊಡುಗೆ

ಕುಕ್ಕೆ ಸುಬ್ರಹ್ಮಣ್ಯ ದೇಗುಲದಿಂದ  ಅಗ್ನಿಶಾಮಕ ದಳಕ್ಕೆ  ಮೋಟಾರ್ ಚಾಲಿತ ಬೋಟ್ ಕೊಡುಗೆ

ಕಡಬ ಟೈಮ್ಸ್, ಸುಬ್ರಹ್ಮಣ್ಯ :ಕುಕ್ಕೆ ದೇಗುಲದ  ವತಿಯಿಂದ ಸುಳ್ಯ ಅಗ್ನಿಶಾಮಕ ದಳಕ್ಕೆ  ಮೋಟಾರ್ ಚಾಲಿತ ಬೋಟ್ ನ್ನು ಶನಿವಾರ  ನೀಡಲಾಯಿತು.

ಮಳೆಗಾಲದಲ್ಲಿ ಕುಮಾರಧಾರ ನದಿ ಉಕ್ಕಿ ಹರಿಯುವ ಸಂದರ್ಭ ಇದರ ಅಗತ್ಯತೆ ಇರುವುದನ್ನು ಮನಗಂಡು 6.75 ಲಕ್ಷ ದ ಬೋಟ್  ನ್ನು ಖರೀದಿಸಲಾಗಿದೆ. ಈ ಹಿಂದೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ದೇವಸ್ಥಾನದಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ವೇಳೆ ನೆರೆ ಪರಿಹಾರ ಸಂದರ್ಭ ಸಹಾಯವಾಗಲೆಂದು ಬೋಟ್ ಖರೀದಿಸುವ ಬಗ್ಗೆ ನಿರ್ಧರಿಸಲಾಗಿತ್ತು.

ಬೋಟ್ ಹಸ್ತಾಂತರ ಸಂದರ್ಭ ದೇವಸ್ಥಾನದ ಕಛೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶಿಷ್ಟಾಚಾರ ವಿಭಾಗದ ಗೋಪಿನಾಥ ನಂಭೀಶ, ನೋಣಪ್ಪ ಮತ್ತಿತರರು ಉಪಸ್ಥಿತರಿದ್ದರು.

970×90