ಕಡಬ:ಸ್ವಂತ ಖರ್ಚಿನಲ್ಲಿ ಮರದ ಕೊಂಬೆ ತೆರವುಗೊಳಿಸಿ ನಿವಾಸಿಗಳ ಆತಂಕ ದೂರ ಮಾಡಿದ ಮೀರಾ ಸಾಹೇಬ್!

ಕಡಬ:ಸ್ವಂತ ಖರ್ಚಿನಲ್ಲಿ ಮರದ ಕೊಂಬೆ ತೆರವುಗೊಳಿಸಿ ನಿವಾಸಿಗಳ ಆತಂಕ ದೂರ ಮಾಡಿದ ಮೀರಾ ಸಾಹೇಬ್!

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಇಲ್ಲಿನ  ಕಾಲೇಜು ರಸ್ತೆಯಲ್ಲಿರುವ ಅಡ್ಡಗದ್ದೆ ಎಂಬಲ್ಲಿ ಅಪಾಯಕಾರಿ ಮರವೊಂದರ ಕೊಂಬೆಯನ್ನು    ಅಧಿಕಾರಿಗಳ ಸಲಹೆಯಂತೆ ಸಯ್ಯದ್ ಅವರು ತಮ್ಮ ಸ್ವಂತ ಖರ್ಚಿನಲ್ಲಿಮರದ ಕೊಂಬೆ ತೆರವುಗೊಳಿಸಿ ಸಾರ್ವಜನಿಕರ ಆತಂಕವನ್ನು ದೂರ ಮಾಡಿದ್ದಾರೆ.

ಕಡಬ ತಹಶೀಲ್ದಾರ್ ಹಾಗೂ ತಾ.ಪಂ ಆಡಳಿತಾಧಿಕಾರಿಯಾಗಿರುವ  ಜಾನ್ ಪ್ರಕಾಶ್ ಮತ್ತು ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಲ್ಲದೆ ಪಟ್ಟಾ ಜಾಗದಲ್ಲಿ ಇರುವ ಕಾರಣ ಮರದ ವಾರಿಸುದಾರರ ಜೊತೆ ಮಾತುಕತೆ ನಡೆಸಿದ್ದರು .  ಇದೀಗ ಸಾರ್ವಜನಿಕರ ಹಿತ ದೃಷ್ಟಿಯಿಂದ ಮರದ ಕೊಂಬೆಗಳನ್ನು ಮಾತ್ರ  ಕತ್ತರಿಸಿ  ಅನಾಹುತ ಸಂಭವಿಸದಂತೆ ತೆರವು ಮಾಡಲಾಗಿದೆ.

ಮರವನ್ನು ತೆರವುಗೊಳಿಸುವಂತೆ ಫಯಾಜ್ ಅಡ್ಡಗದ್ದೆ ಸಹಿತ  ಅಲ್ಲಿನ ನಿವಾಸಿಗಳು ಗ್ರಾ.ಪಂ ಗೆ ಮಾನವಿ ಮಾಡಿದ್ದರು. ದೂರು ನೀಡಿದರೂ ಕ್ರಮ ಕೈಗೊಳ್ಳದ ಬಗ್ಗೆ ಚರ್ಚೆಯೂ ನಡೆದಿತ್ತು. ಇದೀಗ  ಪ.ಪಂ ಆಡಳಿತಾಧಿಕಾರಿಯ ಅವಧಿಯಲ್ಲಿ  ಸಮಸ್ಯೆ ಬಗೆಹರಿದಿದೆ.

970×90