ಕಡಬ:ಪುತ್ತೂರು-ಕಡಬ 33ಕೆವಿ  ಲೈನ್ ದ್ವೀಮಾರ್ಗ ಕಾಮಗಾರಿ ಮುಕ್ತಾಯದ ಹಂತದಲ್ಲಿ- ಸಜಿ ಕುಮಾರ್

ಕಡಬ:ಪುತ್ತೂರು-ಕಡಬ 33ಕೆವಿ  ಲೈನ್  ದ್ವೀಮಾರ್ಗ ಕಾಮಗಾರಿ ಮುಕ್ತಾಯದ ಹಂತದಲ್ಲಿ- ಸಜಿ ಕುಮಾರ್

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಕಡಬ ಮೆಸ್ಕಾಂ ಕಚೇರಿಗೆ ಗುರುವಾರ  ಭೇಟಿ ನೀಡಿ  ಅಭಿವೃದ್ಧಿ ಕಾರ್ಯಗಳ  ಬಗ್ಗೆ ಚರ್ಚಿಸಿ ಮಾಹಿತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾಹಿತಿ  ನೀಡಿದ ಕಡಬ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ  ಸಜಿ ಕುಮಾರ್ ರವರು   12.5 ಮೆ.ವ್ಯಾ. ಸಾಮರ್ಥ್ಯ ದ ಹೆಚ್ಚುವರಿ  ಪರಿವರ್ತಕ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು  ಪರಿವರ್ತಕ ಅಲವಡಿಸಲು ಬಾಕಿ ಇದ್ದು ಮುಂದಿನ 1ತಿಂಗಳ  ಒಳಗೆ ಕೆಲಸ ಪೂರ್ತಿಯಾಗಲಿದೆ.  ಪುತ್ತೂರು- ಕಡಬ 33ಕೆವಿ  ಲೈನ್ ಆಲಂಕಾರು ವರೇಗೆ ದ್ವೀಮಾರ್ಗ  ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಒಟ್ಟು 25ಕಿ ಮೀ ಕಾಮಗಾರಿ ಯಲ್ಲಿ  22ಕಿ ಮೀ ಕಾಮಗಾರಿ ಈಗಾಗಲೇ ಮುಕ್ತಾಯ ಗೊಂಡಿದೆ.  ಮುಂದಿನ 14 ದಿನಗಳಲ್ಲಿ ವಿದ್ಯುತ್ ನಿಲುಗಡೆ ಗೊಳಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು  ಎಂದರು.

ಮೀನಾಡಿ ಹತ್ತಿರ ಹೆಚ್ಚುವರಿ ಪರಿವರ್ತಕ ಅಳವಡಿಸುವಿಕೆ,  ಮುಳಿಮಜಲು ಕೊಪ್ಪ-  ಮೀನಾಡಿ ನೈಲ ಬಳಿ ಮದ್ಯಂತರ. ಕಂಬ ಅಳವಡಿಸುವ ಕುರಿತು, ಕೃಷಿ ಪಂಪು ಕನೆಕ್ಷನ್ ಇದ್ದವರಿಂದ ಆಧಾರ್ ಸಂಖ್ಯೆ ಪಡೆದು ಕೊಳ್ಳುವ ಕಾಂಗ್ರೆಸ್ ಮುಕ್ಗಂಡರು  ಬಗ್ಗೆ ಚರ್ಚಿಸಿದರು. ತಾಲೂಕು  ಮಟ್ಟದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಕಳೆದ 6 ತಿಂಗಳ ಹಿಂದೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು  ,ನಂತರ ಆಗಿರುವ ಬೆಳವಣಿಗೆಗಳ ಕುರಿತು ಮಾಹಿತಿ ಪಡೆಯಲು ಈ ತಂಡ ಭೇಟಿ ನೀಡಿ ಚರ್ಚಿಸಿದ್ದಾರೆ.

970×90