ಕಡಬ:ಸ್ವಾತಂತ್ಯೋತ್ಸವ ಆಚರಣೆ ಹಿನ್ನೆಲೆ ತಾಲೂಕು ಆಡಳಿತದಿಂದ ಪೂರ್ವಭಾವಿ ಸಭೆ

ಕಡಬ:ಸ್ವಾತಂತ್ಯೋತ್ಸವ ಆಚರಣೆ ಹಿನ್ನೆಲೆ ತಾಲೂಕು ಆಡಳಿತದಿಂದ  ಪೂರ್ವಭಾವಿ ಸಭೆ

ಕಡಬ ಟೈಮ್ಸ್,ಪಟ್ಟಣ ಸುದ್ದಿ: ತಾಲೂಕು ಆಡಳಿತ ವತಿಯಿಂದ ಆಗಸ್ಟ್ 15 ರಂದು ಸ್ವಾತಂತ್ಯೋತ್ಸವ ಆಚರಿಸಲಾಗುತ್ತಿದ್ದು ಈ ಕುರಿತಾಗಿ ಪೂರ್ವಭಾವಿ ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆಯಿತು.

ಈ ಭಾರಿಯ ಸ್ವಾತಂತ್ರೋತ್ಸವವನ್ನು ಸರಕಾರದ ಮಾರ್ಗಸೂಚಿ ಯಂತೆ ಸರಳವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಅಂದು ಮುಂಜಾನೆ ತಹಸೀಲ್ದಾರ್ ಕಛೇರಿಯಲ್ಲಿ ಧ್ವಜಾರೋಹಣ, ಬಳಿಕ ಎಪಿಎಂಸಿ ಪ್ರಾಂಗಣದಲ್ಲಿ ಸರಳ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಮಯದಲ್ಲಿ
ಕೊರೋನಾ ವಾರಿಯರ್ಸ್‌ ಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

ಸಭೆಯಲ್ಲಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ಸೇರಿದಂತೆ ಜಿ.ಪಂ ಸದಸ್ಯರು, ತಾ.ಪಂ‌ ಸದಸ್ಯರು, ವಿವಿಧ ಇಲಾಖಾಧಿಕಾರಿಗಳು,ವಿವಿಧ ಸಂಘದ ಪದಾಧಿಕಾರಿಗಳು ಹಾಜರಿದ್ದರು.

970×90