ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ,ಅರ್ಚಕರ ಕುಟುಂಬ ನಾಪತ್ತೆ,ಮನೆಯಲ್ಲಿದ್ದ ಐವರೂ ಮಣ್ಣಿನಡಿ ಸಿಲುಕಿರುವ ಶಂಕೆ

ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ,ಅರ್ಚಕರ  ಕುಟುಂಬ ನಾಪತ್ತೆ,ಮನೆಯಲ್ಲಿದ್ದ ಐವರೂ ಮಣ್ಣಿನಡಿ  ಸಿಲುಕಿರುವ  ಶಂಕೆ

ಕಡಬ ಟೈಮ್ಸ್, ಮುಖ್ಯ ಸುದ್ದಿ: ಕೊಡಗಿನ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದಿದ್ದು, ದೇವಳದ ಪಕ್ಕದಲ್ಲಿದ್ದ ಅರ್ಚಕರ 2 ಮನೆಗಳು ಮಗುಚಿ ಬಿದ್ದಿವೆ. ತಲಕಾವೇರಿ ದೇವಾಲಯದ ಅರ್ಚಕರಾದ ನಾರಾಯಣ ಆಚಾರ್‌ರವರ ಮತ್ತು ವಿಠಲ ಆಚಾರ್‌ರವರ ಮನೆಗಳು ಧರಾಶಾಯಿಯಾಗಿದ್ದು, ನಾರಾಯಣ ಆಚಾರ್ಯರ ಕುಟುಂಬ ನಾಪತ್ತೆಯಾಗಿದೆ.ಆ ಮನೆಯಲ್ಲಿದ್ದ ಐವರೂ ಮಣ್ಣಿನಡಿ ಬಿದ್ದು ಸಮಾಧಿಯಾಗಿರಬೇಕೆಂದು ಶಂಕಿಸಲಾಗಿದೆ.

ಕಳೆದ ರಾತ್ರಿ ಈ ಘಟನೆ ನಡೆದಿದ್ದು, ನಾರಾಯಣ ಆಚಾರ್, ಅವರ ಪತ್ನಿ ಶಾಂತಾ, ನಾರಾಯಣ ಆಚಾರ್‌ರ ಅಣ್ಣ ಆನಂದ ತೀರ್ಥರು (ರಾಜಗೋಪಾಲ್ ಆಚಾರ್),  ಪೂಜಾ ಸಹಾಯಕರಾಗಿದ್ದ ಬಿ.ಸಿ.ರೋಡ್‌ನ ರವಿಕಿರಣ್ ಹಾಗೂ ಮುಳ್ಳೇರಿಯಾದ ಶ್ರೀನಿವಾಸ ಪಡ್ಡಿಲ್ಲಾಯರವರು ಕಾಣೆಯಾಗಿದ್ದಾರೆ.  ಇನ್ನೊಂದು ಕುಟುಂಬವಾದ ವಿಠಲ ಆಚಾರ್‌ರವರು ಮತ್ತು ಅವರ ಕುಟುಂಬ ಸದಸ್ಯರು ಭಾಗಮಂಡಲದ ಮನೆಯಲ್ಲಿದ್ದುದರಿಂದ ಸುರಕ್ಷಿತವಾಗಿದ್ದಾರೆ.

ಭಾಗಮಂಡಲ ಕೂಡಾ ಪ್ರವಾಹ ತುಂಬಿ ರಸ್ತೆಗಳು ಬಂದ್ ಆಗಿವೆ. ಕೊಡಗು ಜಿಲ್ಲಾಡಳಿತ ತಲಕಾವೇರಿಗೆ ತಲುಪಿದ್ದು, ನೆಟ್ವರ್ಕ್ ಇಲ್ಲದಿರುವ ಕಾರಣ ಹೊರಜಗತ್ತಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ  ಎಂಬ ಮಾಹಿತಿ ಲಭ್ಯವಾಗಿದೆ.

970×90