ಕಡಬ: ಪಾಲೋಳಿಯ ಮನೆಯೊಂದರ ಮೇಲೆ ಕಡಬ ಪೊಲೀಸರ ತಂಡದಿಂದ ದಾಳಿ | ಎರಡು ನಕಲಿ ಪಿಸ್ತೂಲ್  ಸಹಿತ ಸ್ಪೋಟಕ ಪತ್ತೆ ,ವ್ಯಕ್ತಿಯ ಬಂಧನ

ಕಡಬ: ಪಾಲೋಳಿಯ ಮನೆಯೊಂದರ ಮೇಲೆ ಕಡಬ ಪೊಲೀಸರ ತಂಡದಿಂದ ದಾಳಿ | ಎರಡು ನಕಲಿ  ಪಿಸ್ತೂಲ್  ಸಹಿತ ಸ್ಪೋಟಕ ಪತ್ತೆ ,ವ್ಯಕ್ತಿಯ ಬಂಧನ

nಕಡಬ ಟೈಮ್ಸ್, ಪಟ್ಟಣ ಸುದ್ದಿ: ಯಾವುದೇ ಪರವಾನಿಗೆ ಇಲ್ಲದೆ ನಕಲಿ ಪಿಸ್ತುಲ್ ಹೊಂದಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿಯ ಮೇರೆಗೆ  ಕಡಬ ಎಸ್. ಐ ರುಕ್ಮ ನಾಯ್ಕ್ ನೇತೃತ್ವದ  ಪೊಲೀಸರ ತಂಡ ಪತ್ತೆ ಹಚ್ಚಿ ಬುಧವಾರ ಬಂಧಿಸಿದ್ದಾರೆ.

ಕಡಬ ತಾಲೂಕು ಕಡಬ ಗ್ರಾಮದ ಪಾಲೋಳಿಯ  ಜನಾರ್ಧನ್ ಗೌಡ ಬಂಧಿತ ಆರೋಪಿ. ಈತನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 02 ನಕಲಿ ಪಿಸ್ತೂಲ್ ಮತ್ತು  02 ಖಾಲಿ ತೋಟೆ ಹಾಗೂರಂಜಕ, ಪೊಟ್ಯಾಶಿಯಂ ಕೇಪುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.ಈ ರೀತಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ವಶದಲ್ಲಿ ಇಟ್ಟುಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದ್ದು  ಈತನನ್ನು ಪೊಲೀಸರು  ದಸ್ತಗಿರಿ ಮಾಡಿ ವಶಕ್ಕೆ ಪಡಕೊಂಡು ಆತನ ಮೇಲೆ ಶಸ್ತ್ರಾಸ್ತಗಳ ಅಧೀನಿಯಮ  ಹಾಗೂ ಸ್ಪೋಟಕಗಳ ಅಧಿನಿಯಮದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಬಿ.ಎಂ  ಲಕ್ಷ್ಮೀಪ್ರಸಾದ್  ರವರ ಆದೇಶದಂತೆ ಹಾಗೂ  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್   ಹೆಚ್ಚುವರಿ ಪೊಲೀಸ್  ಅಧೀಕ್ಷಕರಾದ ವಿಕ್ರಂ  ಆಮ್ಟೆ ರವರ ಮಾರ್ಗದರ್ಶನದಂತೆ ,  ಪುತ್ತೂರು ಉಪವಿಭಾಗದ ಪೊಲೀಸ್  ಉಪಾಧೀಕ್ಷಕರಾದ  ದಿನಕರ ಶೆಟ್ಟಿ ರವರ ನಿದರ್ಶನದಂತೆ ಮತ್ತು ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಉಮೇಶ್  ಉಪ್ಪಳಿಕೆ ರವರ ಸಲಹೆಯಂತೆ   ಕಡಬ  ಪೊಲೀಸ್  ಠಾಣಾ ಉಪನಿರೀಕ್ಷಕರಾದ ರುಕ್ಮಾ ನಾಯ್ಕ್  ತಂಡ ಕಾರ್ಯಾಚರಣೆ ಮಾಡಿದೆ. ಕಾರ್ಯಾಚರಣೆಯಲ್ಲಿ  ಎ ಎಸ್. ಐ   ಚಿದಾನಂದ ರೈ, ಎಚ್. ಸಿ ಸ್ಕರಿಯ, ಪಿ ಸಿ   ಭವಿತ್ ರೈ, ಶ್ರೀಶೈಲ್, ಮಹೇಶ್ ,ಜೀಪು ಚಾಲಕ ಕನಕರಾಜ್  ಪಾಲ್ಗೊಂಡಿದ್ದರು.

970×90