ಅಯೋಧ್ಯೆಯತ್ತ ಹೊರಟ ಪ್ರಧಾನಿ ಮೋದಿ

ಅಯೋಧ್ಯೆಯತ್ತ ಹೊರಟ ಪ್ರಧಾನಿ ಮೋದಿ

ಕಡಬ ಟೈಮ್ಸ್, ನವದೆಹಲಿ:  ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭೂಮಿ ಪೂಜೆಗೆ ಅಯೋಧ್ಯೆ ನಗರಿ ಸರ್ವ ಸನ್ನದ್ಧವಾಗಿದ್ದು  ಪ್ರಧಾನಿ ಮೋದಿ  ಬುಧವಾರ ಭೂಮಿ ಪೂಜೆ ನೆರವೇರಿಸಲಿದ್ದಾರೆ. ದೆ.

ನವದೆಹಲಿಯಿಂದ ವಾಯುಸೇನೆ ವಿಶೇಷ ವಿಮಾನದಲ್ಲಿ ಮೋದಿ  ಅಯೋಧ್ಯೆಯತ್ತ ಪ್ರಯಾಣ ಆರಂಭಿಸಿದ್ದಾರೆ.  ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಟಿರುವ ಪ್ರಧಾನಿಯವರು  ಕೆಲವೇ ಗಂಟೆಗಳಲ್ಲಿ ಅಯೋಧ್ಯೆ ತಲುಪಲಿದ್ದಾರೆ.

ಪ್ರಧಾನಿ ಮೋದಿ ಅವರ ಸ್ವಾಗತಕ್ಕೆ ಇಡೀ ಅಯೋಧ್ಯೆ ನಗರ ಕಾಯುತ್ತಿದ್ದು, ಭೂಮಿ ಪೂಜೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ಬಾಬಾ ರಾಮ್ ದೇವ್  ಸೇರಿದಂತೆ ಹಲವು ಗಣ್ಯರು ಈಗಾಗಲೇ ಅಯೋಧ್ಯೆಯಲ್ಲಿದ್ದಾರೆ. ಕೃಪೆ( ANI NEWS)

970×90