ಸುಬ್ರಹ್ಮಣ್ಯ: ಸ್ನಾನ ಘಟ್ಟ ಮುಳುಗಡೆ,ಸುಬ್ರಹ್ಮಣ್ಯ – ಪಂಜ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕು

ಸುಬ್ರಹ್ಮಣ್ಯ: ಸ್ನಾನ ಘಟ್ಟ ಮುಳುಗಡೆ,ಸುಬ್ರಹ್ಮಣ್ಯ – ಪಂಜ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕು

ಕಡಬ ಟೈಮ್ಸ್,ಸುಬ್ರಹ್ಮಣ್ಯ: ಪಶ್ಚಿಮಘಟ್ಟ ಸೇರಿದಂತೆ ಕುಮಾರ ಪರ್ವತ ತಪ್ಪಲಿನಲ್ಲಿ ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾದ ಕಾರಣ ಕುಮಾರಧಾರಾ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ.

ಮಂಗಳವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ- ಪಂಜ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಕುಕ್ಕೆ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕುಮಾರಧಾರಾ ನದಿಯ ಗುಂಡ್ಯ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಭೀಕರ ಗಾಳಿ ಮಳೆಗೆ ಮನೆ, ವಾಹನಗಳು ಹಾನಿಯಾದ ವರದಿಯಾಗಿದೆ.

ಭಾರೀ ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಹೀಗಾಗಿ ಹಲೆವೆಡೆ ವಿದ್ಯುತ್ ಸಂಪರ್ಕವೂ ವ್ಯತ್ಯವಾಗಿದೆ.ಭೀಕರ ಮಳೆಗೆ ಹಲವು ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ನದಿ ತೀರದ ಬಹುತೇಕ ಕೃಷಿ ಭೂಮಿಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.ಸ್ಥಳೀಯಾಡಳಿದ ಅಲ್ಲಲ್ಲಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಸನ್ನದವಾಗಿದೆ.

970×90