ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಮತ್ತು ಸದಸ್ಯರೊಬ್ಬರು ಸೇರಿ ಅವ್ಯವಹಾರ: ಧನಂಜಯ ಕೇನಾಜೆ ಆರೋಪ

ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಮತ್ತು ಸದಸ್ಯರೊಬ್ಬರು ಸೇರಿ ಅವ್ಯವಹಾರ: ಧನಂಜಯ ಕೇನಾಜೆ ಆರೋಪ

ಕಡಬ ಟೈಮ್ಸ್, ಪಟ್ಟಣ ಸುದ್ದಿ:ಕಾಣಿಯೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಮತ್ತು ಸದಸ್ಯರೊಬ್ಬರು ಪಂಚಾಯಿತಿಯಲ್ಲಿ ಅವ್ಯವಹಾರ ನಡೆಸಿದನ್ನು ಮರೆಮಾಚಲು ಇನ್ನೊಬ್ಬ ಮಾಜಿ ಸದಸ್ಯರೊಬ್ಬರ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಚಾರ್ವಾಕ ಹಾ.ಉ.ಸ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಆರೋಪಿಸಿದ್ದಾರೆ.

ಕಡಬದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಅಧ್ಯಕ್ಷೆ ಮಾಧವಿ ಕೋಡಂದೂರು ಮತ್ತು ಮಾಜಿ ಸದಸ್ಯ ದಿನೇಶ್ ಇಡ್ಯಡ್ಕ ಅವರು ತಮ್ಮ ಅವಧಿಯಲ್ಲಿ ಪಂಚಾಯಿತಿಯಲ್ಲಿ ಅವ್ಯವಹಾರ ನಡೆಸಿರುತ್ತಾರೆ ಇದರ ವಿರುದ್ಧ ಧ್ವನಿ ಎತ್ತಿರುವ ಗಣೇಶ್ ಉದನಡ್ಕರವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ತೇಜೋವಧೆ ಮಾಡುತ್ತಿದ್ದಾರೆ .ಗ್ರಾಮ ಪಂ. ಮಾಜಿ ಅಧ್ಯಕ್ಷೆ ತಮ್ಮ ಅಧಿಕಾರವಧಿಯಲ್ಲಿ ಮನೆ ನಿರ್ಮಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಮಾಹಿತಿ ಹಕ್ಕಿನ ವರದಿಯಲ್ಲಿ ಬಹಿರಂಗಗೊಂಡಿದ್ದು, ಈ ಬಗ್ಗೆ ಸಾರ್ವಜನಿಕರು ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಭಿವೃದ್ಧಿ ಅಧಿಕಾರಿಯವರು ಸತತ ನೋಟೀಸ್ ನೀಡಿದರೂ ಮಾಜಿ ಅಧ್ಯಕ್ಷರು ಇದಕ್ಕೆ ಉತ್ತರ ನೀಡಿಲ್ಲ. ಇವರು ವಿಕಲಚೇತನರೋರ್ವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ಅರ್ಹ ಫಲಾನುಭವಿಗಳ ಹೆಸರನ್ನು ದುರುದ್ಧೇಶದಿಂದ ಕೈ ಬಿಟ್ಟು ತಮಗೆ ಬೇಕಾದವರ ಹೆಸರನ್ನು ಸೇರಿಸಿ ರಾಜಕೀಯ ಮಾಡಿರುತ್ತಾರೆ. ಇವರ ತಪ್ಪನ್ನು ಗಣೇಶ್ ಅವರ ಮೇಲೆ ಹೊರಿಸಿ ಪತ್ರಿಕಾಗೋಷ್ಠಿ ನಡೆಸಿರುತ್ತಾರೆ

ತನಗೆ ಸಾಮಾನ್ಯ ಸಭೆಯಲ್ಲಿ ಜೀವಬೆದರಿಕೆಯೊಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಮಹಿಳಾ ಠಾಣೆಗೆ ಮಾಧವಿಯವರು ಗಣೇಶ್ ಅವರ ವಿರುದ್ದಸುಳ್ಳು ದೂರು ನೀಡಿರುತ್ತಾರೆ. ಈ ಬಗ್ಗೆ ಪಂ ಅಭಿವೃದ್ಧಿ ಅಧಿಕಾರಿಗಳು ಈಗಾಗಲೇ ಮೇಲಾಧಿಕಾರಿಗಳಿಗೆ ವರದಿ ನೀಡಿರುತ್ತಾರೆ.ಸರ್ಕಾರದಿಂದ ಬಡವರಿಗೆ ಬರುವ ಹೊಲಿಗೆ ಯಂತ್ರವನ್ನು ಅರ್ಹ ಫಲಾನುಭವಿಗಳಿಗೆ ನಿಡದೇ ಮಾಧವಿಯವರು ತಮ್ಮ ಸ್ವಂತಕ್ಕೆ ಮಂಜೂರು ಮಾಡಿಸಿಕೊಂಡಿದ್ದಾರೆ. ಇವರೊಂದಿಗೆ ಅವ್ಯವಹಾರದಲ್ಲಿ ಭಾಗಿಯಾಗಿದ್ದ ದಿನೇಶ್ ಗೌಡ ಇಡ್ಯಡ್ಕ ತಮ್ಮ ಅಧಿಕಾರವಧಿಯಲ್ಲಿ ಅಕ್ರಮವಾಗಿ ತನ್ನ ಪತ್ನಿಯ ಹೆಸರಿಗೆ ಇನ್ನೊದು ಮನೆ ಮಂಜೂರು ಮಾಡಿಸಿಕೊಂಡಿರುತ್ತಾರೆ. ಅಲ್ಲದೇ ದೋಳ್ಪಾಡಿ ಅಂಗನವಾಡಿ ಶಾಲೆಯ ಕಾಮಗಾರಿ ನರೇಗಾ ಯೋಜನೆಯಡಿಯಲ್ಲಿ ನಡೆದಿದ್ದು ಇದರ ಸುಮಾರು ಹಣವನ್ನು ದಿನೇಶ್ ಇಡ್ಯಡ್ಕರವರು ತಮ್ಮ ಸ್ವಂತ ಖಾತೆಯಲ್ಲಿಯೇ ಇಟ್ಟುಕೊಂಡಿದ್ದು, ಆ ಹಣವನ್ನು ಇದುವರೆಗೂ ನೀಡದೇ ಇರುವುದರಿಂದ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಈ ಎಲ್ಲಾ ಭ್ರಷ್ಟಾಚಾರಗಳು ಬಯಲಿಗೆ ಬರಬಹುದು ಎಂಬ ಭಯದಿಂದ ಗಣೇಶ್‍ರವರ ವಿರುದ್ಧ ಮಾಡುತ್ತಿರುವ ಆರೋಪವನ್ನು ಸಾಬೀತುಪಡಿಸಲಿ, ಇಲ್ಲವೆ ನೆರವಾಗಿ ನಮ್ಮನ್ನು ಚುನಾವಣೆಯಲ್ಲಿ ಎದುರಿಸಲಿ ಎಂದು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಚಾರ್ವಕ ಸಿಎ ಬ್ಯಾಂಕಿನ ಅಧ್ಯಕ್ಷ ಆನಂದ ಗೌಡ ಮೇಕ್ಮನೆ, ನಿರ್ದೆಶಕ ಹರೀಶ್ ಅಂಬುಲ, ಪಿ.ಎಲ್.ಡಿ ಬ್ಯಾಂಕ್ ನಿರ್ದೆಶಕ ದೇವಯ್ಯ ಗೌಡ ಖಂಡಿಗಾ, ಕಾಣಿಯೂರು ಗ್ರಾ.ಪಂ ಮಾಜಿ ಸದಸ್ಯರಾದ ವೀರಪ್ಪ ಉದಲಡ್ಡ, ಹರೀಶ್ಚಂದ್ರ ನೀಟಡ್ಕ, ಪ್ರಮುಖರಾದ ಚೇತನ್ ನಾವುರೂ ಮತ್ತಿರರು ಉಪಸ್ಥಿತರಿದ್ದರು

970×90