ಕಡಬದ ವರ್ತಕ ಸಂಘ ನಿಷ್ಕ್ರೀಯ, ವರ್ತಕ ಬಳಗ ವಾಟ್ಸಪ್ ಸಕ್ರೀಯ!

ಕಡಬದ ವರ್ತಕ ಸಂಘ ನಿಷ್ಕ್ರೀಯ, ವರ್ತಕ ಬಳಗ ವಾಟ್ಸಪ್ ಸಕ್ರೀಯ!

ಕಡಬ ಟೈಮ್ಸ್ ಪಟ್ಟಣ ಸುದ್ದಿ: ತಾಲೂಕು ಕೇಂದ್ರ ಕಡಬದಲ್ಲಿರುವ ವರ್ತಕ ಸಂಘವು ನಿಷ್ಕ್ರಿಯಗೊಂಡಿದ್ದು ಗೊಂಡಿದ್ದು ಕೂಡಲೇ ಸಂಘದ ಮಹಾಸಭೆ ಕರೆಯುವುವಂತೆ ಕಡಬದ ವರ್ತಕರು ಆಗ್ರಹಿಸುತ್ತಿದ್ದಾರೆ. ಆದರೆ ಸಂಘದ ಅಧ್ಯಕ್ಷರು ಮಾತ್ರ ಯಾವುದಕ್ಕೂ ಮುಂದುವರೆಸುತ್ತಿರುವು ಗೋಚರಿಸುತ್ತಿಲ್ಲ ಈ ಬಗ್ಗೆ ಕಡಬದ ವರ್ತಕ ಬಳಗದ ವ್ಯಾಟ್ಸಾಪ್ ಗ್ರೂಪ್ ಗಳಲ್ಲಿ ಸ್ವಾರಸ್ಯಕರ ಚರ್ಚೆಯಾಗುತ್ತಿದೆ.ವರ್ತಕ ಸಂಘ ನಿಷ್ಕ್ರಿಯವಾಗಿ ಪ್ರತ್ಯೇಕ ವಾಟ್ಸಪ್ ಬಳಗ ಸಕ್ರೀಯ ವಾಗಿದೆ.

ಸುಮಾರು ಏಳೆಂಟು ವರ್ಷಗಳ ಹಿಂದೆ ಕಡಬ ಗ್ರಾಮ ಪಂಚಾಯತ್ ನಲ್ಲಿ ತ್ಯಾಜ್ಯ ವಿಲೇವಾರಿ ಶುಲ್ಕವನ್ನು ಏಕಾಏಕಿ ಏರಿಸಿದ ಸಂದರ್ಭದಲ್ಲಿ ಅದನ್ನು ವಿರೋಧಿಸುದಕ್ಕಾಗಿ ಕಡಬದ ವರ್ತಕರೆಲ್ಲರೂ ಸಭೆ ಸೇರಿ, ಕೀರ್ತಿ ಮೋಟಾರ್ಸ್ ನ ನರೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಕಡಬದಲ್ಲಿ ವರ್ತಕ ಸಂಘವನ್ನು ರಚಿಸಿದ್ದರು. ಆ ಬಳಿಕ ಸುಮಾರು ಐದು ವರ್ಷಗಳ ಹಿಂದೆ ಕಡಬದ ಹಿರಿಯ ಛಾಯಗ್ರಾಹಕ ಶಿವರಾಮ ಎಂ.ಎಸ್
ಅವರು ಅಧ್ಯಕ್ಷ ರಾಗಿ , ಜೆಸಿಯ ಮಾಜಿ ಅಧ್ಯಕ್ಷ ಸುಜಿತ್ ಪಿ.ಕೆಯವರನ್ನು ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಿ ಅದ್ದೂರಿ ಯ ಪದಗ್ರಹಣ ನಡೆದಿತ್ತು. ಬಳಿಕ ಕೆಲ ಕಾಲ ಚಟುವಟಿಕೆಯಿಂದ ಇದ್ದ ಸಂಘವು ಬರಬರುತ್ತಾ ನಿಷ್ಕ್ರಿಯ ಗೊಂಡಿತ್ತು. ಕಾರ್ಯದರ್ಶಿ, ಉಪಾಧ್ಯಕ್ಷ ಸೇರಿದಂತೆ ಹಲವು ಮಂದಿ ಪದಾಧಿಕಾರಿಗಳು ತಮ್ಮ ಹುದ್ದೆ ಗಳಿಗೆ ರಾಜಿನಾಮೆ ನೀಡಿದ್ದರು. ವಿಶೇಷವೆನೆಂದರೆ ಐದು ವರ್ಷದಲ್ಲಿ ಒಂದೇ ಒಂದು ಮಹಾಸಭೆಯ ಯನ್ನು ಕರೆಯದಿರುವುದೇ ಚರ್ಚಾ ವಿಷಯ ಮತ್ತು ಪ್ರಶ್ನಾತೀತವಾಗಿದೆ.
ಅಧ್ಯಕ್ಷರು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವ ಸರ್ಕಸ್ ನಲ್ಲಿಯೇ ನಿರತರಾಗಿದ್ದಾರಾ ಎನ್ನು ಸಂಶಯ ಸಾರ್ವಜನಿಕರದ್ದು.

ಕಳೆದ ಎರಡು ವರ್ಷಗಳಿಂದ ಕಡಬದ ವರ್ತಕ ಪ್ರಮುಖರು ಅಧ್ಯಕ್ಷರ ಮನೆಗೆ ತೆರಳಿ ಸಂಘದ ಸಭೆ ಕರೆಯಿರಿ ಎಂದು ಗೊಗೆರೆದರೂ, ಅವರು ಸ್ಪಂಧಿಸದಿರುವುದು ಪ್ರಶ್ನೆಯಾಗಿಯೇ ಉಳಿದಿದೆ.
ಕೆಲ ದಿನಗಳ ಹಿಂದೆ ಕಡಬದ ಅಡಿಕೆ ವರ್ತಕ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಅವರು ಅಧ್ಯಕ್ಷ ರ ಜತೆ ಮಾತುಕತೆ ನಡೆಸಿ ಕೂಡಲೇ ವರ್ತಕ ಸಂಘದ ಸಭೆ ನಡೆಸುವುದಾಗಿ ವರ್ತಕರ ವಾಟ್ಸಾಪ್ ಗ್ರೂಪ್ ನಲ್ಲಿ ಧ್ವನಿ ಸಂದೇಶದ ಭರವಸೆ ನೀಡಿದ್ದರು. ಆದರೆ ಅದೂ ಫಲ ನೀಡದಿರುವುದು ವಿಷಾದದ ಸಂಗತಿ..

ಪ್ರತಿ ಭಾರಿ ಸಭೆ ಕರೆಯದಿರಲು ಏನಾದರೊಂದು ಕುಂಟು ನೆಪ ಒಡ್ಡುತ್ತಲೆ ಬಂದಿದ್ದ ಅಧ್ಯಕ್ಷರು ಈ ಬಾರಿ ಸಭೆ ಕರೆಯಲು ಕೊರೋನಾ ಅಡ್ಡಿ ಎಂಬ ವಿಷಯವನ್ನೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅಧ್ಯಕ್ಷರು ಸಭೆ ಕರೆಯಲು ಒಪ್ಪದಿರುವುದಕ್ಕೆ ಕಾರಣಗಳೆನು ಎನ್ನುವುದು ಇನ್ನೂ ನಿಗೂಢವಾಗಿದೆ. ಸಂಘದ ಸದಸ್ಯತ್ವ ಶುಲ್ಕ ದ ಹೆಸರಿನಲ್ಲಿ ಸಾವಿರಾರು ರೂಪಾಯಿ ಸಂಗ್ರಹ ಗೊಂಡಿದ್ದು ಆ ಬಗ್ಗೆ ಯಾವುದೇ ಲೆಕ್ಕ ಪತ್ರಗಳಿಲ್ಲ ಎನ್ನಲಾಗಿದೆ, ಸಭೆ ಕರೆದರೆ ತಾನು ಅಧ್ಯಕ್ಷ ಕುರ್ಚಿ ಕಳೆದುಕೊಳ್ಳಬೇಕಾಗಬಹುದೆಂಬ ಭೀತಿ ಅವರಲ್ಲಿದೆ ಎನ್ನುವುದು ಇನ್ನೂ ಕೆಲವರ ಅಭಿಪ್ರಾಯ. ಈಗಾಗಲೇ ಸಂಘವನ್ನು ಪುನರ್ ರಚನೆ ಮಾಡುವ ಬಗ್ಗೆ ಪ್ರಯತ್ನಗಳು ತೀವ್ರಗೊಂಡಿದ್ದು ಆ.10 ಸೋಮವಾರ ದೊಳಗೆ ಸಭೆಯನ್ನು ಕರೆಯಬೇಕೆಂದು ವರ್ತಕರು ಅಧ್ಯಕ್ಷರಿಗೆ ಗಡುವು ನೀಡಿದ್ದಾರೆ. ಇಲ್ಲದೆ ಹೊದರೆ ವರ್ತಕರೆಲ್ಲ ಸೇರಿ ತಮ್ಮ ಮುಂದಿನ ನಡೆಯನ್ನು ನಿರ್ಧರಿಸಲಿದ್ದಾರೆ ಎಂಬ ಮಾಹಿತಿ  ಲಭ್ಯವಾಗಿದೆ. ಹೊಸ ಪಟ್ಟಣ ಪಂಚಾತ್ ಗೆ ಚುನಾವಣೆ ಆಗುವ ಮುನ್ನ ವರ್ತಕರ ಸಂಘ ಆಕ್ಟೀವ್ ಆಗುತ್ತಾ ಕಾದು ನೋಡಬೇಕಿದೆ.

970×90