ಹೊಸಮಠ: ಕುಟ್ರುಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್ ಗೆ ಫುಡ್ ಕಿಟ್ ವಿತರಣೆ

ಹೊಸಮಠ: ಕುಟ್ರುಪಾಡಿ ಹಾಲು ಉತ್ಪಾದಕರ ಸಹಕಾರಿ  ಸಂಘದ ವತಿಯಿಂದ ಕೊರೋನಾ ವಾರಿಯರ್ಸ್ ಗೆ ಫುಡ್ ಕಿಟ್ ವಿತರಣೆ

ಕಡಬ ಟೈಮ್ಸ್, ಹೊಸಮಠ:ಕುಟ್ರುಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಗ್ರಾಮದ ಆಶಾ ಕಾರ್ಯಕರ್ತೆ ಯರಿಗೆ ಮತ್ತು ಲಾಕ್ ಡೌನ್ ವೇಳೆ ಕಾರ್ಯನಿರ್ವಹಿಸಿದ ಸಂಘದ ಸಿಬ್ಬಂದಿ ಗಳಿಗೆ ಫುಡ್ ಕಿಡ್ ಮತ್ತು ಮಾಸ್ಕ್ ನೀಡಲಾಯಿತು.

ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಎನ್ .ಕಿರಣ್ ಗೋಗಟೆ ಅವರ ಅಧ್ಯಕ್ಷತೆಯಲ್ಲಿ ಜು.೨೯ ರಂದು ನಡೆದ ಸಭೆಯ ಸಂದರ್ಭದಲ್ಲಿ ನೀಡಲಾಯಿತು.ಬಳಿಕ ಮಾತನಾಡಿದ ಕಿರಣ್ ಗೋಗಟೆಯವರು ಲಾಕ್ ಡೌನ್ ವೇಳೆಯೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿ ಗ್ರಾಹಕರಿಗೆ ಸೇವೆ ನೀಡುವಲ್ಲಿ ಶ್ರಮಿಸಿದ್ದಾರೆ ಅಲ್ಲದೆ ಗ್ರಾಮದ ಆಶಾ ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ದುಡಿದಿದ್ದು ಸಂಘದ ಮೂಲಕ ಅವರ ಸೇವೆಯನ್ನು ಗುರುತಿಸುವುದು ನಮ್ಮ ಜವಾಬ್ದಾರಿ ಎಂದರು.

ಕಾರ್ಯಕ್ರಮದಲ್ಲಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ‌ ಕರುಣಾಕರ ಗೋಗಟೆ,ಸಂಘದ ಉಪಾಧ್ಯಕ್ಷ ವಿಶ್ವನಾಥ ರೈ,ಕಾರ್ಯದರ್ಶಿ ಕೊರಗಪ್ಪ ಗೌಡ, ನಿರ್ದೇಶಕರಾದ ಟಿ.ಎಂ ಕ್ಲೇವಿಯರ್, ವೆಂಕಟ್ ಆರಿಗ, ಬಾಬು ಪೂಜಾರಿ, ‌ಜಯಪ್ರಕಾಶ್,ನಾಗಪ್ಪ ‌ರಾಣ್ಯ, ಲಲಿತ ಸಂಪಡ್ಕ,ಧರ್ಮಾವತಿ, ಮೋನಪ್ಪ ಗೌಡ ನಾಡೋಳಿ,ಪದ್ಮನಾಭ ಹಾಜರಿದ್ದರು. ಸಂಘದ ಸಿಬ್ಬಂದಿಗಳು ಸಹಕರಿಸಿರು.

970×90