ಮರ್ದಾಳ: ಬಹುಪಯೋಗಿ ಯಂತ್ರ ಆವಿಷ್ಕರಿಸಿದ ಯುವಕನಿಗೆ ಕಾಂಗ್ರೆಸ್ ಕಿಸಾನ್ ಘಟಕದಿಂದ ಸನ್ಮಾನ

ಮರ್ದಾಳ: ಬಹುಪಯೋಗಿ ಯಂತ್ರ ಆವಿಷ್ಕರಿಸಿದ ಯುವಕನಿಗೆ  ಕಾಂಗ್ರೆಸ್ ಕಿಸಾನ್ ಘಟಕದಿಂದ ಸನ್ಮಾನ

ಕಡಬ ಟೈಮ್ಸ್, ಮರ್ದಾಳ:ಹಳೆ ಬೈಕ್‌ ಇಂಜಿನ್ ಬಳಸಿ   ಬಹುಪಯೋಗಿ ಯಂತ್ರವನ್ನು ತಯಾರಿಸಿದ ನಂದನ್ ಮರ್ದಾಳ   ಅವರನ್ನು ಅವರ ಮನೆಯಂಗಳದಲ್ಲಿ  ಕಡಬ ಬ್ಲಾಕ್ ಕಾಂಗ್ರೆಸ್ ಮತ್ತು  ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ಬುಧವಾರ ಸನ್ಮಾನಿಸಲಾಯಿತು.

ದ.ಕ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮೋಹನ ಗೌಡ ಕಲ್ಮಂಜ ಅವರು ಸನ್ಮಾನಿಸಿ  ಮಾತನಾಡಿ,  ಯುವ ಕೃಷಿಕರು ಅವರ ಸಾಧನೆ ನಮ್ಮ ಕೃಷಿಕ ಸಮಾಜಕ್ಕೆ ಒಂದು ದೊಡ್ಡ ಆಸ್ತಿಯಾಗಿದೆ. ಸರಕಾರಗಳ ಸಂಶೋಧನಾ ಇಲಾಖೆಗಳು ಮಾಡಬೇಕಾದ ಕೆಲಸ ಕಾರ್ಯಗಳನ್ನು ಇಂತಹ ಯುವ ಕೃಷಿಕ ವಿಜ್ಞಾನಿಗಳು ಅವಿಷ್ಕಾರ ಮಾಡಿ ಸಮಾಜಕ್ಕೆ ನೀಡುತ್ತಿರುವುದು ಹೆಮ್ಮೆಯ ಸಂಗತಿ .ಇಂತಹ ಯುವ ಪ್ರತಿಭೆಗಳನ್ನು ಕೃಷಿಕರನ್ನು ಜಿಲ್ಲೆಯಾದ್ಯಂತ ಕಿಸಾನ್ ಕಾಂಗ್ರೆಸ್ ಗುರುತಿಸಿ ಪ್ರೋತ್ಸಾಹ ನೀಡಲಿದೆ ಎಂದರು.

ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ  ಯತೀಶ್ ಕುಮಾರ್ ಬಾನಡ್ಕ, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಕಡಬ, ನೆಲ್ಯಾಡಿ ಪ.ಪಂ ಸದಸ್ಯ ಸರ್ವೊತ್ತಮ ಗೌಡ. ಕೆಪಿಸಿಸಿ ಸದಸ್ಯ ಡಾ| ರಘು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

970×90