ಕುಟ್ರುಪಾಡಿ ಗ್ರಾಮವೊಂದರಲ್ಲೇ 10 ಕೊರೋನಾ ಪ್ರಕರಣ, ನಾಲ್ಕು ಮಂದಿ ಗುಣಮುಖ

ಕುಟ್ರುಪಾಡಿ ಗ್ರಾಮವೊಂದರಲ್ಲೇ 10 ಕೊರೋನಾ ಪ್ರಕರಣ, ನಾಲ್ಕು ಮಂದಿ ಗುಣಮುಖ

 

ಕಡಬ ಟೈಮ್ಸ್, ಕುಟ್ರುಪಾಡಿ: ಇಲ್ಲಿನ ಗ್ರಾಮವೊಂದರಲ್ಲೇ ಒಟ್ಟು ಒಟ್ಟು 10  ಪ್ರಕರಣಗಳು ದಾಖಲಾಗಿದ್ದು ಆಸ್ಪತ್ರೆಯಲ್ಲಿ ಓರ್ವ ಕೋರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಅವರವರ ಮನೆಯಲ್ಲಿಯೇ ಇರುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನಾಲ್ಕು ಮಂದಿ ಗುಣಮುಖರಾಗಿದ್ದಾರೆ  ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಹಾಯಕಿ ರಾಜೇಶ್ವರಿ ಎನ್,ವಿ ಮಾಹಿತಿ ನೀಡಿದ್ದಾರೆ.

ಸೋಮವಾರ ಕುಟ್ರುಪಾಡಿ ಗ್ರಾ.ಪಂ. ಹಾಗೂ ಎಡಮಂಗಲ ಗ್ರಾಮ ಪಂಚಾಯತ್ ಜಂಟಿಯಾಗಿ ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ಕೋವಿಡ್ ಕಾರ‍್ಯಪಡೆಯ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಆರೋಗ್ಯ ಸಹಾಯಕಿ ಆನ್ಸಿ ತೋಮಸ್ ಅವರು ಮಾಹಿತಿ ನೀಡಿ ಬಲ್ಯ ಪ್ರದೇಶದಲ್ಲಿ ಒಂದು ಕೋವಿಡ್ ಪ್ರಕರಣ ದಾಖಲಾಗಿದೆ ಎಂದು ಹೇಳಿದರು, ಎಡಮಂಗಲದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯ ಸಹಾಯಕಿ ಕೆ.ಕೆ.ವಿಮಲ ಮಾಹಿತಿ ನೀಡಿದರು.

970×90