ಕಡಬ:ಬಡ ಕುಟುಂಬದ ನೆರವಿಗೆ ಬಂದ ದಾನಿಗಳು ,ಆನ್ ಲೈನ್ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳ ಮನೆಗೆ ಬಂತು ಟಿವಿ, ಸ್ಮಾರ್ಟ್ ಪೋನ್!

ಕಡಬ:ಬಡ ಕುಟುಂಬದ ನೆರವಿಗೆ ಬಂದ  ದಾನಿಗಳು ,ಆನ್ ಲೈನ್ ಶಿಕ್ಷಣದಿಂದ ವಂಚಿತರಾಗಿದ್ದ  ಮಕ್ಕಳ  ಮನೆಗೆ ಬಂತು ಟಿವಿ, ಸ್ಮಾರ್ಟ್ ಪೋನ್!

ಕಡಬ ಟೈಮ್ಸ್, ಕೋಡಿಂಬಾಳ:ಇಲ್ಲಿನ ದೊಡ್ಡಕೊಪ್ಪದಲ್ಲಿ ಆನ್ ಲೈನ್ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳ ಮನೆಗೆ ಸೋಮವಾರ ಟಿವಿ- ಸ್ಮಾರ್ಟ್ ಫೋನ್ ತಲುಪಿದೆ.

ಈ ಬಡ ಕುಟುಂಬದ ಸ್ಥಿತಿಗತಿ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬಳಿಕ ಹಲವಾರು ದಾನಿಗಳು ಸಹಾಯಾಸ್ತಕ್ಕೆ ಮುಂದಾಗಿದ್ದರು. ಇದೀಗ ನೆಲ್ಯಾಡಿಯ ಸಂತ ಅಲ್ಫೋನ್ಸಾ ಮತ್ತು ಆರ್ಲ ಸಂತ ಮೇರಿಸ್ ಚರ್ಚಿನ “ಕಿರಿಕುಸುಮ” ಮಿಷನ್ ಲೀಗ್ ಮಕ್ಕಳ ತಂಡವು ರೆವರೆಂಡ್ ಫಾದರ್ ಆದರ್ಶ್ ಜೋಸೆಫ್ ನೇತೃತ್ವದಲ್ಲಿ ಸ್ಮಾರ್ಟ್ ಟಿವಿ ನೀಡಿದ್ದಾರೆ.  ಕಡಬ ಸರ್ಕಾರಿ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಕಡಬ ಸರಕಾರಿ ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾದ ಸಚಿನ್ ಎ ಮರ್ದಾಳ, ಕುಶಾಲಪ್ಪ ಕಲ್ಲಂತಡ್ಕ , ಚಿಂತಾಮಣಿ  ಅವರ ಸ್ನೇಹಿತರು ತಂಡ ವರುಣ್​​ ಮತ್ತು  ಲಾವಣ್ಯಳಿಗೆ ಕಲಿಕೆಗೆ ಪೂರಕವಾಗಿ ಸ್ಮಾರ್ಟ್​ಫೋನ್​ವೊಂದನ್ನು ಕಳುಹಿಸಿದ್ದು ವರದಿಗಾರರು ಮನೆಗೆ ತಲುಪಿಸಿದ್ದಾರೆ. ಉಪ್ಪಿನಂಗಡಿ ಮೂಲದ ಸೋಲಾರ್ ಸಂಸ್ಥೆ ಕಲಿಕೆ ಬೇಕಾದ ಸಲಕರಣೆ ನೀಡಿ ಆರ್ಥಿಕವಾಗಿಯೂ ಸಹಾಯಾಸ್ತ ನೀಡಿದ್ದಾರೆ.

ಇನ್ನಷ್ಟು ಸಮಾನ ಮನಸ್ಕರು ಈ ಬಡ ಕುಟುಂಬದ ಬ್ಯಾಂಕ್ ಖಾತೆಯ ನಂಬರ್ ಪಡೆದು ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.

970×90