ಲಾಕ್ ಡೌನ್ ಗೆ ಸಹಕರಿಸಿದ ಕಾಣಿಯೂರಿನ ಜನತೆ

ಲಾಕ್ ಡೌನ್ ಗೆ ಸಹಕರಿಸಿದ ಕಾಣಿಯೂರಿನ ಜನತೆ

ಕಡಬ ಟೈಮ್ಸ್ ,ಕಾಣಿಯೂರು: ಕೊರೋನಾ ಮಾರಕ ರೋಗ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಭಾನುವಾರದ 4ನೇ ಲಾಕ್ ಡೌನ್ ದಿನವೂ ಕಾಣಿಯೂರು ಪೇಟೆಯು ಸಂಪೂರ್ಣ ಸ್ತಬ್ಧಗೊಂಡಿತ್ತು.

ಬೆಳಿಗ್ಗೆಯಿಂದಲೇ ಎಲ್ಲಾ ಅಂಗಡಿ ಮಾಲಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ರಸ್ತೆಗಿಳಿಯದೆ ಮನೆಯಲ್ಲಿಯೇ ಉಳಿದು ಕೊಂಡು ಕೊರೋನ ವಿರುದ್ಧದ ಲಾಕ್ ಡೌನ್ ಗೆ ಉತ್ತಮ ಬೆಂಬಲ ಸೂಚಿಸಿದ್ದಾರೆ.

970×90