ನೂಜಿಬಾಳ್ತಿಲದಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆ

ನೂಜಿಬಾಳ್ತಿಲದಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆ

ಕಡಬ ಟೈಮ್ಸ್, ಕಲ್ಲುಗುಡ್ಡೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಇದರ ನೂಜಿಬಾಳ್ತಿಲ ಒಕ್ಕೂಟದ ವತಿಯಿಂದ ಗುರುವಾರ ಕಲ್ಲುಗುಡ್ಡೆ ಗುಬ್ಬಿ ಎಂಬವರ ಭತ್ತದ ಗದ್ದೆಯಲ್ಲಿ ಯಾಂತ್ರೀಕೃತ ಶ್ರೀ ಪದ್ಧತಿ ಭತ್ತ ಬೇಸಾಯ ಯಂತ್ರಶ್ರೀ ಪ್ರಾತ್ಯಕ್ಷಿಕೆ ನಡೆಯಿತು.

ಭತ್ತವನ್ನು ಟ್ರೇ ಯಲ್ಲಿ ಬಿತ್ತನೆ ಮಾಡಿದ ಬಳಿಕ ಯಂತ್ರದ ಸಹಾಯದಲ್ಲಿ ಗದ್ದೆಯಲ್ಲಿ ನಾಟಿ ಮಾಡುವ ಹಾಗೂ ಬತ್ತದ ಕೃಷಿ ಯಾಂತ್ರೀಕೃತ ವಿಧಾನದ ಕುರಿತು ಪ್ರಾತ್ಯಕ್ಷಿಕೆ, ಯೋಜನೆಯ ಸವಲತ್ತುಗಳ ಬಗ್ಗೆ ಕೃಷಿ ಅಧಿಕಾರಿ ಉಮೇಶ್ ಮಾಹಿತಿ ನೀಡಿ, ಕೃಷಿಯಲ್ಲಿ ಆಧುನಿಕ ಪದ್ಧತಿ, ಯಾಂತ್ರೀಕತೆ ಬಳಸಿಕೊಳ್ಳುವುದರಿಂದ ಕೃಷಿಕರಿಗೆ ಸಮಯ ಹಾಗೂ ಖರ್ಚಿನಲ್ಲಿ ಉಳಿತಾಯವಾಗಲಿದೆ ಎಂದರು

ಯೋಜನೆಯ ಬಿಳಿನೆಲೆ ವಲಯ ಅಧ್ಯಕ್ಷ ಸತೀಶ್ ಎರ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೂಜಿಬಾಳ್ತಿಲ ಒಕ್ಕೂಟ ಅಧ್ಯಕ್ಷ ಪುರುಷೋತ್ತಮ ಮಿತ್ತಂಡೇಲು, ಮನೆಯ ಯಜಮಾನಿ ಗುಬ್ಬಿ, ಪ್ರಮುಖರಾದ ನಾರ್ಣಪ್ಪ ಗೌಡ, ಮೋನಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಧರ್ಣಪ್ಪ ,ಸೇವಾಪ್ರತಿನಿಧಿ ದಯಾನಂದ , ಪೋಸ್ಟ್ ಮಾಸ್ಟರ್ ಜಿನೇಂದ್ರ ಜೈನ್, ಆನಂದ ಮಿತ್ತಂಡೇಲು, ಸುದೀಶ್ ಕುಮಾರ್, ಧರ್ಣಪ್ಪ ಕಲ್ಲುಗುಡ್ಡೆ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

970×90