ಕಡಬ ಪಟ್ಟಣ:ಭಾನುವಾರದ ಲಾಕ್‌ಡೌನ್ ಗೆ ಹೊಂದಿಕೊಂಡ ಜನತೆ

ಕಡಬ ಪಟ್ಟಣ:ಭಾನುವಾರದ ಲಾಕ್‌ಡೌನ್ ಗೆ ಹೊಂದಿಕೊಂಡ ಜನತೆ

ಕಡಬ ಟೈಮ್ಸ್,ಪಟ್ಟಣ ಸುದ್ದಿ: ಕೊರೋನ ವೈರಸ್ ಸೋಂಕಿತರ ಸಂಖ್ಯೆ  ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ರವಿವಾರ ಸರ್ಕಾರ ಲಾಕ್‌ಡೌನ್ ಗೋಷಿಸಿದ್ದು,   4ನೇ ಆದಿತ್ಯವಾರದ  ಲಾಕ್‌ಡೌನ್‌ನಿಂದಾಗಿ ಕಡಬ ಪಟ್ಟಣ  ಪೇಟೆ ಸ್ತಬ್ಧಗೊಂಡಿದೆ .

 

ಅಗತ್ಯ ಕೆಲಸ ಕಾರ್ಯಗಳಿಗಾಗಿ ಬೆರಳೆಣಿಕೆಯ ಮಂದಿ ಮಾತ್ರ ರಸ್ತೆಗಳಲ್ಲಿ ಓಡಾಟ ನಡೆಸುತ್ತಿರುವುದು ಕಂಡು ಬಂದಿದೆ.ಅಗತ್ಯವಾಗಳಷ್ಟೇ ಸಂಚರಿಸುತ್ತಿದ್ದು,  ಕಡಬ ಪೊಲೀಸರು ಠಾಣಾ ಮುಂಭಾಗದ ರಸ್ತೆಯಲ್ಲಿ  ಬ್ಯಾರಿಕೇಡ್ ಅಳವಡಿಸಿ ವಾಹನಗಳ ಮೇಲೆ ನಿಗಾ ವಹಿಸಿದ್ದಾರೆ.

ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿರುವ ನೆಲ್ಯಾಡಿ, ಆಲಂಕಾರು,ಸುಬ್ರಹ್ಮಣ್ಯ, ಸವಣೂರಿನಲ್ಲಿಯೂ  ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿವೆ.

970×90