ರೆಖ್ಯಾದ ಯುವಕ ಆತ್ಮಹತ್ಯೆಗೆ ಶರಣು

ರೆಖ್ಯಾದ ಯುವಕ ಆತ್ಮಹತ್ಯೆಗೆ ಶರಣು

ಕಡಬ ಟೈಮ್ಸ್ ವರದಿ: ರೆಖ್ಯಾ ಗ್ರಾಮದ ಕುರುಡೇಲು ಮನೆ ನಿವಾಸಿ ಸನತ್(25ವ)  ನೇಣಿಗೆ ಶರಣಾದ ಘಟನೆ ಜು.25 ರಂದು ನಡೆದಿದೆ.

ಸನತ್ ರವರು ಬೆಳಿಗ್ಗೆ ತೋಟಕ್ಕೆ ಅಡಿಕೆ ಹೆಕ್ಕಲು ಹೋದವರು ನಂತರ ಮನೆಗೆ ಬಂದು ಮನೆಯ ಪಕ್ಕದಲ್ಲಿರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.ಮೃತರು ತಂದೆ, ತಾಯಿ, ಸಹೋದರ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

970×90