ಕುಕ್ಕೆ ದೇಗುಲದೊಳಗೆ ನಾಗರಹಾವು ಪ್ರದಕ್ಷಿಣೆ

ಕುಕ್ಕೆ ದೇಗುಲದೊಳಗೆ ನಾಗರಹಾವು ಪ್ರದಕ್ಷಿಣೆ

ಕಡಬ ಟೈಮ್ಸ್, ಸುಬ್ರಹ್ಮಣ್ಯ: ಕಡಬ ತಾಲೂಕಿನ
ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿಯಂದು ನಾಗರಹಾವು ದೇಗುಲದೊಳಗೆ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದೆ.

ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ ನಡೆದಿದ್ದು ಆ ಪ್ರಯುಕ್ತ ಸೀಯಾಳ, ಹಾಲು ಅಭಿಷೇಕ ನಡೆದು ಪೂಜಾ ಕಾರ್ಯ ನೆರವೇರಿತು. ಪೂಜಾ ಕಾರ್ಯ ನೆರೆವೇರಿದ ಬಳಿಕ ದೇವಸ್ಥಾನದ ಒಳಾಂಗಣದಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದೆ.

ಒಳಾಂಗಣದಲ್ಲಿ ಸುತ್ತಿದ ನಾಗರ ಹಾವು ಬಳಿಕ ಹೊರಬಂದು ಪಡು ಬಾಗಿಲಿನ ಮೂಲಕ ಹೊರಹೋಗಿದೆ .

ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಕಛೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶಿಷ್ಟಾಚಾರ ವಿಭಾಗದ ಗೋಪಿನಾಥ ನಂಬೀಶ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅರ್ಚಕ ನಾರಾಯಣ ನೂರಿತ್ತಾಯ ಪೂಜಾ ಕಾರ್ಯ ನೆರೆವೇರಿಸಿದರು.

970×90