ನೆಲ್ಯಾಡಿ ವರ್ತಕರ ಸಂಘ ನಿರ್ಧಾರ: ಮಧ್ಯಾಹ್ನದ ಬಳಿಕ  ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್‌

ನೆಲ್ಯಾಡಿ ವರ್ತಕರ ಸಂಘ ನಿರ್ಧಾರ: ಮಧ್ಯಾಹ್ನದ ಬಳಿಕ  ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್‌

ಕಡಬ ಟೈಮ್, ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ  ಭಾಗದಲ್ಲೂ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವ ಕಾರಣ ಮುಂಜಾಗೃತಾ ಕ್ರಮವಾಗಿ ನೆಲ್ಯಾಡಿ  ಮತ್ತು ಕೌಕ್ರಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಜು.31ರ ತನಕ ಮಧ್ಯಾಹ್ನ 2 ಗಂಟೆಯ ಬಳಿಕ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಲು ನಿರ್ಧರಿಸಲಾಗಿದೆ.

ಈ ಕುರಿತಾಗಿ ಬುಧವಾರ  ಬೆಳಿಗ್ಗೆ ನೆಲ್ಯಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ನೆಲ್ಯಾಡಿ ಗ್ರಾ.ಪಂ. ಕೊರೋನಾ ಕಾರ್ಯಪಡೆ ಮತ್ತು ನೆಲ್ಯಾಡಿ ವರ್ತಕ ಸಂಘದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ನೆಲ್ಯಾಡಿ ಪೇಟೆ ಸೇರಿದಂತೆ ನೆಲ್ಯಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ  ಜು.23ರಿಂದ 31ರ ತನಕ ಬೆಳಗ್ಗೆ 7ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಅಂಗಡಿಗಳನ್ನು ತೆರೆದಿಟ್ಟು ಮಧ್ಯಾಹ್ನ 2ರ ಬಳಿಕ ವೈನ್‌ಶಾಪ್, ಬಾರ್ ಸಹಿತ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್‌ಗೆ ನಿರ್ಣಯಿಸಲಾಗಿದೆ.

ಇದರ ಜೊತೆಗೆ  ರಿಕ್ಷಾ, ಜೀಪುಗಳ ಓಡಾಟವನ್ನು ಮಧ್ಯಾಹ್ನ 2 ಗಂಟೆಯ ತನಕ ಸೀಮಿತಗೊಳಿಸಲಾಗಿದೆ. ಈ ಬಗ್ಗೆ ಪ್ರಕಟಣೆಯನ್ನೂ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಎಂದಿನಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಡಿಕೊಂಡು ಸಮಯ ಪಾಲನೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

970×90