ಪೆರಿಯಶಾಂತಿ:ಕಾಡಾನೆ ದಾಳಿ ಮಾಡಿದ ಕೃಷಿಕರ ತೋಟಕ್ಕೆ ತಾ.ಪಂ ಸದಸ್ಯೆ ಭೇಟಿ|ಸ್ಥಳದಿಂದಲೇ ಅರಣ್ಯಾಧಿಕಾರಿಗೆ ಪೋನಾಯಿಸಿದ ಕೆ.ಟಿ ವಲ್ಸಮ್ಮ

ಪೆರಿಯಶಾಂತಿ:ಕಾಡಾನೆ ದಾಳಿ ಮಾಡಿದ ಕೃಷಿಕರ ತೋಟಕ್ಕೆ ತಾ.ಪಂ ಸದಸ್ಯೆ ಭೇಟಿ|ಸ್ಥಳದಿಂದಲೇ ಅರಣ್ಯಾಧಿಕಾರಿಗೆ ಪೋನಾಯಿಸಿದ ಕೆ.ಟಿ ವಲ್ಸಮ್ಮ

ಕಡಬ ಟೈಮ್ಸ್, ಪೆರಿಯಶಾಂತಿ:  ಕಡಬ ತಾಲೂಕಿನ  ಕೌಕ್ರಾಡಿಯ ಪೆರಿಯಶಾಂತಿ, ಮಣ್ಣಗುಂಡಿ ಪ್ರದೇಶದಲ್ಲಿ ಕಾಡಾನೆಯ ದಾಳಿಯಿಂದ ಹಾನಿಗೊಂಡ ಕೃಷಿ  ತೋಟಗಳಿಗೆ ತಾ.ಪಂ ಸದಸ್ಯೆ  ಕೆ.ಟಿ. ವಲ್ಸಮ್ಮ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಕಾಡಾನೆಯು ಕೃಷಿಯನ್ನು ಹಾನಿಗೊಳಿಸಿರುವುದನ್ನು ಪರಿಶೀಲನೆ ನಡೆಸಿದ  ಅವರು  ಅರಣ್ಯ ಇಲಾಖೆ ಅಧಿಕಾರಿಗೆ ಸ್ಥಳದಿಂದಲೇ  ಕರೆ ಮಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಿ, ಆನೆಯನ್ನು ಕಾಡಿಗೆ ಅಟ್ಟುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಈ ಪರಿಸರದಲ್ಲಿ ದಾರಿ ದೀಪದ ವ್ಯವಸ್ಥೆ ಇಲ್ಲದಿರುವ ಬಗ್ಗೆಯೂ ಗ್ರಾಮಸ್ಥರು ತಾ.ಪಂ ಸದಸ್ಯರ ಗಮನಕ್ಕೆ ತಂದಿದ್ದು   ಆನೆ ಮನೆ ಅಂಗಳದ ತನಕ ಬಂದರೂ ಗೊತ್ತಾಗುವುದಿಲ್ಲ, ಬೀದಿ ದೀಪದ ವ್ಯವಸ್ಥೆ  ಕಲ್ಪಿಸುವಂತೆ ಬೇಡಿಕೆ ಇಟ್ಟರು. ಈ ವೇಳೆ ಗ್ರಾ.ಪಂ ಮಾಹಿತಿ ನೀಡಿ ಈ ಭಾಗದಲ್ಲಿ ಬೀದಿ ದೀಪ ಅಳವಡಿಸುವಂತೆ ಆಗ್ರಹಿಸಿದರು.

ಕಳೆದ  ಕೆಲ ದಿನಗಳಿಂದ ಕಾಡಾನೆ  ತೋಟದೊಳಗೆ ನುಗ್ಗಿ  ಪುಂಡಾಟ ನಡೆಸಿದ ಬಗ್ಗೆ ಕಡಬ ಟೈಮ್ಸ್ ಸೇರಿದಂತೆ ಇತರ ಮಾಧ್ಯಮಗಳು ವರದಿ ಬಿತ್ತರಿಸಿದ್ದವು.

970×90