ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡ ಸುಳ್ಯದ ಬ್ಯಾಂಕ್ ಉದ್ಯೋಗಿ

ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡ ಸುಳ್ಯದ ಬ್ಯಾಂಕ್ ಉದ್ಯೋಗಿ

ಕಡಬ ಟೈಮ್ಸ್ ವಿಶೇಷ: ಸುಳ್ಯದ  ಬ್ಯಾಂಕ್ ಉದ್ಯೋಗಿಯೊಬ್ಬರು ಮೈಸೂರಿನ ಆರ್.ಆರ್.ಗ್ರೂಪ್ಸ್ ಏರ್ಪಡಿಸಿದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಕರ್ನಾಟಕ -2020 ಆಗಿ ಆಯ್ಕೆಯಾಗಿದ್ದಾರೆ.

ಬೀರಮಂಗಲ ನಿವಾಸಿ ಸುಪ್ರೀತಾ ಕೆ.ಎಸ್ ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡವರು. ರಾಕಿಂಗ್ ರತು ಗ್ರೂಪ್ಸ್ ಪ್ರತಿವರ್ಷ ಈ ಸೌಂದರ್ಯ ಸ್ಪರ್ಧೆ ಏರ್ಪಡಿಸುತ್ತಿದ್ದು, ಜು.11 ರಂದು ಮೈಸೂರಿನ ಕಂಟ್ರಿ ಇನ್ ಹೋಟೆಲ್ ನ ಸಭಾಂಗಣದಲ್ಲಿ ಸ್ಪರ್ಧೆ ನಡೆದಿತ್ತು. ಸುಪ್ರೀತಾರವರಿಗೆ ಆರ್.ಆರ್.ಗ್ರೂಪ್ಸ್‌ನ ಎಂ.ಡಿ  ರಾಜೇಶ್  ಸಿದ್ಧಮಲ್ಲಪ್ಪವಂಶ ಕಿರೀಟ ತೊಡಿಸಿ, ಕಪ್ ನೀಡಿ ಗೌರವಿಸಿದ್ದಾರೆ.

ಮಿಸೆಸ್ ಕರ್ನಾಟಕ ಆಗಿ ಆಯ್ಕೆಯಾಗಿರುವ ಸುಪ್ರೀತಾ ಕೆ.ಎಸ್. ರವರು ಸುಳ್ಯ ಬೀರಮಂಗಲ ನಿವಾಸಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅಜಿತ್ ಬಿ.ಟಿ. ಯವರ ಪತ್ನಿಯಾಗಿದ್ದಾರೆ. ವಿಜಯಾ ಬ್ಯಾಂಕ್ ಉದ್ಯೋಗಿಯಾಗಿರುವ ಇವರು  ಚಿತ್ರಕಲೆ, ಸಂಗೀತ, ಯೋಗ, ಅಕ್ವೇರಿಯಂ, ಕರಕುಶಲತೆ, ಗಾರ್ಡನಿಂಗ್ ಹವ್ಯಾಸ ಹೊಂದಿದ್ದಾರೆ.

8 ವರ್ಷದ ಪುತ್ರ ಇಶಾನ್ ತಾಯಿಯಾಗಿರುವ ಸುಪ್ರೀತಾ ಈಗ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ. ಪುತ್ತೂರು ನಿವಾಸಿ ಕೆ.ಸುರೇಶ್-ಸವಿತಾ ಸುರೇಶ್ ದಂಪತಿಯ ಪುತ್ರಿಯಾಗಿರುವ ಈಕೆ ಉಡುಪಿಯಲ್ಲಿ ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣ ಪೂರೈಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಓದಿದ್ದಾರೆ.

 

970×90