ಕಡಬ:ಜನ ಸಾಮಾನ್ಯರಿಗೆ ದುಬಾರಿಯಾದ ಹಸಿ ಮೀನು ,ಗ್ರಾಹಕರು ವಿರಳ

ಕಡಬ:ಜನ ಸಾಮಾನ್ಯರಿಗೆ ದುಬಾರಿಯಾದ ಹಸಿ ಮೀನು ,ಗ್ರಾಹಕರು ವಿರಳ

ಕಡಬ ಟೈಮ್ಸ್, ಪಟ್ಟಣ ಸುದ್ದಿ:ಲಾಕ್ ಡೌನ್ ಬಳಿಕ ಎಲ್ಲಾ ಆಹಾರ ಪದಾರ್ಥ ಗಳಿಗೆ ದರ ಹೆಚ್ಚಳವಾಗಿದೆ.ಇದಕ್ಕೆ ಹಸಿ ಮೀನು ಕೂಡ ಹೊರತಾಗಿಲ್ಲ.ಶನಿವಾರ ಹಸಿಮೀನು ಸ್ಟಾಲ್ ನಲ್ಲಿ ಬಂಗುಡೆ ಕೆ.ಜಿ ಗೆ 340 ರೂ, ಬೂತಾಯಿ 240 ರೂ ಇತ್ತು.ಉಳಿದ ತರಾವರಿ ಮೀನುಗಳು ಲಭ್ಯವಿರಲಿಲ್ಲ.

ದರ ಹೆಚ್ಚಳದ ಹಿನ್ನೆಲೆ ಹಸಿ ಮೀನು ಖರೀದಿಸಲು ಗ್ರಾಹಕರು  ಜನ ಸಾಮಾನ್ಯರು ಮುಂದಾಗದಿರುವುದು ಕಂಡು ಬಂತು.ಬಹುತೇಕರು ಒಣ ಮೀನು ಮತ್ತು ಕೋಳಿ ಮಾಂಸ ಖರೀದಿಸಲು ಮುಂದಾಗಿದ್ದಾರೆ.

ಮೀನು ವ್ಯಾಪಾರಸ್ಥರು ಹೇಳುವಂತೆ ಲಾಕ್ ಡೌನ್ ಕಾರಣ ಸಮರ್ಪಕವಾಗಿ ಮೀನು ಲಭ್ಯವಾಗುತ್ತಿಲ್ಲ,ಸಾಗಾಟ ವೆಚ್ಚ ಇತರ ಖರ್ಚು ಸೇರಿದಾಗ ದರ ಹೆಚ್ಚಳ ಅನಿವಾರ್ಯವೆನ್ನುತ್ತಾರೆ.

970×90