ಕಡಬವೆಂಬ ಗ್ರಾಮೀಣ ಭಾಗದಲ್ಲಿ ಉದಯವಾಯ್ತು ಈ ದೇಶಿ ಆ್ಯಪ್ !

ಕಡಬವೆಂಬ ಗ್ರಾಮೀಣ ಭಾಗದಲ್ಲಿ ಉದಯವಾಯ್ತು ಈ ದೇಶಿ ಆ್ಯಪ್ !

ಕಡಬ ಟೈಮ್ಸ್, ವಿಶೇಷವಿ.ಕೆ ಕಡಬ: ಇಂಟರ್ನೆಂಟ್  ಜಗತ್ತಿನಲ್ಲಿ ಹಲವು ಬಗೆಯ ಮನೋರಂಜನಾ ಆ್ಯಪ್  ಗಳು ಬೆರಳ ತುದಿಯಲ್ಲಿ ಸಿಗುತ್ತದೆ. ಈ ನಡುವೆ   ಕಡಬದಿಂದ ನಿರ್ವಹಿಸಲ್ಪಡುವ   ದೇಶಿ ಆ್ಯಪ್ ಈಗ ಸುದ್ದಿಯಲ್ಲಿದೆ.

ಉದಯ ಆಚಾರ್ ಪುತ್ತಿಲ ಅವರ ಸಂಪಾದಕತ್ವದಲ್ಲಿ ಮನೋರಂಜನೆ,  ಗಾಸಿಪ್, ಟ್ರೆಂಡಿಂಗ್ ಸುದ್ದಿಗಳನ್ನು ಹೊತ್ತ  ಈ ಆ್ಯಪ್ ನ ಹೆಸರು “ Uday Multimedia  ”.  ಕಡಬ ತಾಲೂಕಿನ ಬಲ್ಯದಲ್ಲಿ ನೆಲೆಸಿರುವ ಉದಯ ಆಚಾರ್ ಸ್ವ ಉದ್ಯೋಗದ  ಜೊತೆಗೆ ಈಗಿನ ಟ್ರೆಂಡ್ ಗೆ ಅನುಗುಣವಾಗಿ ಹೊಸ ಕಾನ್ಸೆಪ್ಟ್  ಇರುವ  ಆ್ಯಪ್   ನಿರ್ವಹಿಸುತ್ತಿದ್ದಾರೆ.

ಸರ್ಕಾರ ಚೀನಾ ಮೂಲದ  ಆ್ಯಪ್ ಗಳನ್ನು ನಿಷೇಧಿಸಿದ ಬಳಿಕ ದೇಶಿಯ ಆ್ಯಪ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ನಡುವೆ  Uday Multimedia ಆ್ಯಪ್  ನ್ನು ಕೂಡ ಜನರು ಮೆಚ್ಚಿಕೊಂಡಿದ್ದು ಹಲವು ಮಂದಿ ಬಳಕೆಗೆ ಮುಂದಾಗಿದ್ದಾರೆ. ಈ ತಾಣದಲ್ಲಿ ಭಾಷವಾರು ಆಯ್ಕೆಗಳಿದ್ದು ಸಾರ್ವಜನಿಕರು ತಮ್ಮ ಭಿನ್ನ ಹೊಸ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಲು ಅವಕಾಶವಿದೆ.  ಸುದ್ದಿಗಳಿಗಿಂತ ಭಿನ್ನವಾಗಿರುವ ಮತ್ತು ಮನೋರಂಜನೆಗೆ ಹತ್ತಿರವಾಗುವ ಸುದ್ದಿಗಳನ್ನು ಈ ತಾಣದಲ್ಲಿ ಪಡೆಯಬಹುದಾಗಿದೆ.  ದೇಶದ ವಿವಿಧ ಭಾಗದ ಜನರು ಟ್ರೆಂಡಿಂಗ್ ಸುದ್ದಿಗಳನ್ನು ಇಷ್ಟ ಪಡುತ್ತಾರೆ ಎನ್ನುತ್ತಾರೆ ಉದಯ ಆಚಾರ್.

ಉತ್ತಮ ಪೋಟೊಗ್ರಫಿ, ಬರವಣಿಗೆಯನ್ನೂ ರೂಢಿಸಿಕೊಂಡ  ಉದಯ ರವರು   ಅಂತರ್ಜಾಲ ಲೋಕದಲ್ಲಿ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ  . ದೇಶದ ಮೂಲೆ ಮೂಲೆಯಲ್ಲಿರುವ ಜನ ಈ ಆಪ್ ನ ಮೂಲಕ ಅವರ ಅಭಿರುಚಿಗೆ ತಕ್ಕ ಸುದ್ದಿಗಳನ್ನು ಓದಿ ಖುಷಿ ಪಡುತ್ತಿದ್ದಾರೆ. ಜಗದಗಲ ಹಬ್ಬಿರುವ ಈ ಆಪ್ ಕಡಬವೆಂಬ ಗ್ರಾಮೀಣ ಭಾಗದಿಂದ ನಿರ್ವಹಣೆಯಾಗುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಅಪ್ಲಿಕೇಶನ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Uday Multimedia

970×90