ಕಡಬ: ಠಾಣೆಯಲ್ಲಿ ಪ್ರಿಯಕರನೇ ಬೇಕೆಂದ ವಿವಾಹಿತ ಮಹಿಳೆ!

ಕಡಬ: ಠಾಣೆಯಲ್ಲಿ ಪ್ರಿಯಕರನೇ ಬೇಕೆಂದ ವಿವಾಹಿತ ಮಹಿಳೆ!

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಬೀಡಿ ಬ್ರ್ಯಾಂಚ್ ಗೆಂದು ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೋರ್ವರು ಕೊಯಿಲದಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ.

ನಾಪತ್ತೆ ಯಾದವರನ್ನು ಪತ್ತೆ ಹಚ್ಚಿದ ಪೊಲೀಸರು ಠಾಣೆಗೆ ಇಬ್ಬರನ್ನೂ ಹಾಜರುಪಡಿಸಿದ್ದಾರೆ. ಸಂದರ್ಭದಲ್ಲಿ ವಿವಾಹಿತ ಮಹಿಳೆಯು ತಾನು ಪ್ರಿಯಕರನೇ ಬೇಕೆಂದು ಹೇಳಿ ಆತನೊಂದಿಗೆ ಜೀವನ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಪೊಲೀಸರು ಆಕೆಯನ್ನು ಪ್ರಿಯಕರ ವಿನಯನ ಜತೆ ಕಳುಹಿಸಿ ಕೊಟ್ಟಿದ್ದಾರೆ.

ಕೋಡಿಂಬಾಳ ದಾಸರಗುಡ್ಡೆ ನಿವಾಸಿ ಬಾಬು ಎಂಬವರ ಪತ್ನಿ ಸೋಮವಾರದಂದು ನಾಪತ್ತೆಯಾಗಿದ್ದರು.ಈ ಬಗ್ಗೆ ಆಕೆಯ ಗಂಡ ಕಡಬ ಠಾಣೆಗೆ ದೂರು ನೀಡಿದ್ದರು.

970×90