ಕಡಬ :ಅಗತ್ಯ ಸೇವೆಗಳ ಕಚೇರಿ ಓಪನ್ |ಗ್ರಾಹಕರು ವಿರಳ,ಲಾಕ್ ಡೌನ್ ಗೆ ಜನರ ಬೆಂಬಲ

ಕಡಬ :ಅಗತ್ಯ ಸೇವೆಗಳ ಕಚೇರಿ ಓಪನ್ |ಗ್ರಾಹಕರು ವಿರಳ,ಲಾಕ್ ಡೌನ್  ಗೆ ಜನರ ಬೆಂಬಲ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕೊರೋನಾ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜು.16ರಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಕಡಬ ಪಟ್ಟಣ 11 ಗಂಟೆಯ ಬಳಿಕ ಅಂಗಡಿಗಳು ಮುಚ್ಚಲ್ಪಟ್ಟಿದೆ.

ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಮಾತ್ರ ವಿರಳವಾಗಿದೆ.ಆಸ್ಪತ್ರೆ, ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.ಕೆಲವೊಂದು ದ್ವಿಚಕ್ರ ವಾಹನ, ಸರಕು ಸಾಗಾಟದ ವಾಹನ, ರಿಕ್ಷಾ ಹಾಗೂ ಕೆಲವೊಂದು ಅಗತ್ಯ ಖಾಸಗಿ ವಾಹನಗಳ ಓಡಾಟವಿದೆ.

ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳು, ಅಗತ್ಯ ಸೇವೆಗಳ ಕಛೇರಿಗಳು ತೆರೆದಿದೆ. ಆದರೆ ಗ್ರಾಹಕರ ಸಂಖ್ಯೆ ಮಾತ್ರ ಕಂಡು ಬರುತ್ತಿಲ್ಲ. ಕಡಬ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೂ ವ್ಯಕ್ತವಾಗಿದೆ.

970×90