ಕಲ್ಲುಗುಡ್ಡೆ : ಅಂಗವೈಕಲ್ಯ ಮೆಟ್ಟಿನಿಂತ ಸಾಧಕ | ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಮನೋಜ್

ಕಲ್ಲುಗುಡ್ಡೆ : ಅಂಗವೈಕಲ್ಯ ಮೆಟ್ಟಿನಿಂತ ಸಾಧಕ | ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಮನೋಜ್

ಕಡಬ ಟೈಮ್ಸ್, ಕಲ್ಲುಗುಡ್ಡೆ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಎಂಡೋಪೀಡಿತ ವಿದ್ಯಾರ್ಥಿ ರೆಂಜಿಲಾಡಿ ಗ್ರಾಮದ ಮನೋಜ್ ಕುಮಾರ್ ಪಿಯುಸಿ ಕಲಾ ವಿಭಾಗದಲ್ಲಿ ೩೬೦ ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮನೋಜ್ ಕುಮಾರ್ ಕಿವಿ, ಕೈ ಎಲುಬು ಸಮಸ್ಯೆಯಿಂದ ಬಲಲುತ್ತಿದ್ದು, ನಾಲ್ಕು ಬಾರಿ ಶಸ್ತç ಚಿಕಿತ್ಸೆಗೂ ಒಳಗಾಗಿದ್ದಾರೆ. ಶೇ.೮೫ರಷ್ಟು ಎಂಡೋ ಪೀಡಿತರಾಗಿರುವ ಇವರು ತನ್ನ ಆರೋಗ್ಯ ಸಮಸ್ಯೆಯನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ.
ಇವರು ಸೇವಾಭಾರತಿ ಮಂಗಳೂರು ಇವರು ನಡೆಸುತ್ತಿರುವ ರಾಮಕುಂಜ ಕಾಜರುಕುಕ್ಕು ವಿದ್ಯಾಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಕಲಾ ವಿಭಾಗದಲ್ಲಿ ಪಿಯುಸಿಗೆ ತರಬೇತಿ ಪಡೆದಿದ್ದಾರೆ. ಇವರು ಹಳೆನೇರೆಂಕಿಯ ನಿಶ್ಮಿತಾ ಎಂಬವರ ಸಹಾಯದಿಂದ ಉಪ್ಪಿನಂಗಡಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು.

ಇವರಿಗೆ ಶಿಕ್ಷಕರಾದ ಶಶಿಕಲಾ ನರಿಮೊಗರು, ಸವಿತಾ ಹಾಗೂ ಸಹನಾ ತರಬೇತಿ ನೀಡಿದ್ದಾರೆ. ಮನೋಜ್ ಕುಮಾರ್ ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ಪಲ್ಲತಡ್ಕ ಭಾಸ್ಕರ ಗೌಡ ಹಾಗೂ ರೇವತಿ ದಂಪತಿ ಪುತ್ರ. ಇವರು ಎಸ್ಎಸ್ಎಲ್ಸಿ ಬಳಿಕ ನೇರವಾಗಿ ಪಿಯುಸಿ ಪರೀಕ್ಷೆ ಬರೆದಿದ್ದಾರೆ.

970×90