ಕಡಬದ ಅಡ್ಡಗದ್ದೆ ರಸ್ತೆ ಅಭಿವೃದ್ದಿಗೆ 4 ಲಕ್ಷರೂ ಅನುದಾನ| ಬಿಜೆಪಿ ಪ್ರಮುಖರಿಂದ ಕಾಮಗಾರಿಗೆ ಚಾಲನೆ

ಕಡಬದ ಅಡ್ಡಗದ್ದೆ ರಸ್ತೆ ಅಭಿವೃದ್ದಿಗೆ 4 ಲಕ್ಷರೂ ಅನುದಾನ| ಬಿಜೆಪಿ ಪ್ರಮುಖರಿಂದ ಕಾಮಗಾರಿಗೆ ಚಾಲನೆ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬದ ಕಾಲೇಜು ರಸ್ತೆಯಲ್ಲಿನ ಅಡ್ಡಗದ್ದೆ ರಸ್ತೆಯ ಕಾಂಕ್ರೀಟಿಕರಣಕ್ಕೆ ಜಿ.ಪಂ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದರು
ಶಾಸಕ ಎಸ್. ಅಂಗಾರ ಅವರ ಶಿಫಾರಸ್ಸಿನಂತೆ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಮುಖಾಂತರ ನಾಲ್ಕು ಲಕ್ಷ ರೂ ಅನುದಾನ ಬಿಡುಗಡೆಯಾಗಿತ್ತು. ಕಡಬ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಗಿರೀಶ್ ಎ,ಪಿ ತೆಂಗಿನ ಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಜಲೀಲ್ ಬೈತಡ್ಕ, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದಾ ಸುಳ್ಯ ಮಂಡಲ ಕಾರ್ಯದರ್ಶಿ ಫಯಾಜ್ , ಕಡಬ ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಬಿಜೆಪಿ ಹಿರಿಯ ಮುಖಂಡ ಸತೀಶ್ ನಾಯಕ್, ಬಿಜೆಪಿ ಯುವ ಮುಖಂಡ ಅಶೋಕ್ ಕುಮಾರ್ ಪಿ, ಕಡಬ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಸೇರಿದಂತೆ ಪ್ರಮುಖರು ಹಾಜರಿದ್ದರು.

970×90