ಉಪ್ಪಿನಂಗಡಿ: ಅಧಿಕಾರಿಗಳ ದಿಟ್ಟ ಕ್ರಮ, ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ

ಉಪ್ಪಿನಂಗಡಿ: ಅಧಿಕಾರಿಗಳ ದಿಟ್ಟ ಕ್ರಮ, ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ

ಕಡಬ ಟೈಮ್ಸ್, ಉಪ್ಪಿನಂಗಡಿ: ಇಲ್ಲಿ‌ನ ಗ್ರಾ.ಪಂ. ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳ ತರವು ಕಾರ್ಯಾಚರಣೆ ಸೋಮವಾರ ಬೆಳ್ಳಂಬೆಳಗ್ಗೆ ಆರಂಭಿಸಲಾಗಿದೆ.

ಉಪ್ಪಿನಂಗಡಿ ಪೇಟೆ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಹಲವು ಅನಧಿಕೃತ ಅಂಗಡಿಗಳಿದ್ದು, ಇದರ ತೆರವಿಗೆ ಉಪ್ಪಿನಂಗಡಿ  ಗ್ರಾ.ಪಂ. ಮೂರು ದಿನಗಳ ಗಡುವು ನೀಡಿತ್ತು.ಅಲ್ಲದೆ ಧ್ವನಿ ವರ್ಧಕದ  ಮೂಲಕ ಮಾಹಿಯನ್ನು ಸಾರ್ವಜನಿಕರಿಗೂ ತಿಳಿಸಲಾಗಿತ್ತು. ಇದೀಗ  ಸೋಮವಾರ ಬೆಳಗ್ಗೆ ಆರು ಗಂಟೆಯಿಂದಲೇ ಎರಡು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆದಿದೆ.

ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು, ತಾ.ಪಂ. ಇಒ ನವೀನ್ ಭಂಡಾರಿ, ಗ್ರಾ.ಪಂ. ವಿಲ್ಪ್ರೆಡ್ ಲಾರೆನ್ಸ್ ರೊಡ್ರಿಗಸ್ ಭಾಗವಹಿಸಿದ್ದರು.

970×90