ಕಡಬ ಟೈಮ್ಸ್ ವಿಶೇಷ: ಹಳೆ ಬೈಕ್ ಎಂಜಿನ್ ಬಳಸಿ ಬಹುಪಯೋಗಿ ಯಂತ್ರ ಆವಿಷ್ಕರಿಸಿದ ಮರ್ದಾಳದ ಯುವಕ|ಇದು ಮೇಡ್ ಇನ್ ಕಡಬ!

ಕಡಬ ಟೈಮ್ಸ್ ವಿಶೇಷ: ಹಳೆ ಬೈಕ್ ಎಂಜಿನ್ ಬಳಸಿ ಬಹುಪಯೋಗಿ ಯಂತ್ರ ಆವಿಷ್ಕರಿಸಿದ ಮರ್ದಾಳದ ಯುವಕ|ಇದು ಮೇಡ್ ಇನ್ ಕಡಬ!

ಕಡಬ ಟೈಮ್ಸ್, ವಿಶೇಷ ವರದಿವಿ.ಕೆ ಕಡಬ :ಗ್ರಾಮೀಣ ಭಾಗದ ಯುವಕನೊಬ್ಬ ಬೈಕ್ ಇಂಜಿನ್ ಬಳಸಿ  ಬಹುಪಯೋಗಿ ಯಂತ್ರವೊಂದನ್ನು ಆವಿಷ್ಕಾರ ಮಾಡುವ ಮೂಲಕ ಮನೆ ಮಾತಾಗಿದ್ದಾರೆ.

ಕಡಬ ತಾಲೂಕಿನ ಮರ್ದಾಳದ ನಂದನ್  ಲಾಕ್ ಡೌನ್ ಸಮಯದಲ್ಲಿ  ಈ ಹೊಸ  ಆವಿಷ್ಕಾರ ಮಾಡಿದ  ಯುವಕ . ಅಡಿಕೆ ಮರಕ್ಕೆ ಮದ್ದು ಸಿಂಪಡಣೆ ಮತ್ತು ವಾಹನ ವಾಶ್ ಮಾಡಲು ಉಪಯೋಗವಾಗುವಂತೆ   ಬೈಕ್ ಇಂಜಿನ್ ಬಳಸಿ ಮಾರ್ಪಾಡು ಮಾಡಿದ್ದು ಕಡಿಮೆ ವೆಚ್ಚದಲ್ಲಿ  ತಯಾರಿಸಿದ್ದಾರೆ. ಕುಟುಂಬದ ಆಪ್ತರ  ಮನೆಯಲ್ಲಿ ಉಪಯೋಗಕ್ಕೆ ಬಾರದ  ಬೈಕ್ ಇಂಜಿನ್ ನನ್ನು ಬಳಸಿಕೊಂಡು  ಸುಮಾರು ಏಳುವರೆ ಸಾವಿರ ರೂ ಮೌಲ್ಯದ ಕಿಟ್ ಅಳವಡಿಸಿ ಈ ಯಂತ್ರವನ್ನು ತಯಾರಿಸಿದ್ದು ಸುಮಾರು  ಒಂದು ಲೀಟರ್ ಪೆಟ್ರೋಲ್ ನಲ್ಲಿ 600 ಅಡಿಕೆ ಗಿಡಗಳಿಗೆ ಮದ್ದು ಸಿಂಪಡಣೆ ಮಾಡಬಹುದಾಗಿದೆ.ಅಲ್ಲದೆ ಏಕ ಕಾಲಕ್ಕೆ ಆರು ಜನರು ಮದ್ದು ಸಿಂಪಡಣೆ ಮಾಡಲು ಸಾಧ್ಯವಿದೆ.

ಸುಬ್ರಹ್ಮಣ್ಯದಲ್ಲಿ ಜೆಒಸಿ ಪೂರೈಸಿ ಪತ್ತೂರಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದು ಬಳಿಕ ಉಜಿರೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಡಿಪ್ಲೊಮಾ ಪೂರೈಸಿರುವ ಈ ಯುವಕನಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಬಾಲ್ಯದಿಂದಲೇ ಆಸಕ್ತಿ .  ಬೆಂಗಳೂರಿನ ಖಾಸಗಿ ಸಂಸ್ಥೆ ಯಲ್ಲಿ ಕೆಲ ಕಾಲ ಕೆಲಸ ನಿರ್ವಹಿಸಿ ಬಳಿಕ ಪಂಜದ ಅಂಗಡಿಯೊಂದರಲ್ಲಿ ಕೃಷಿಯಂತ್ರದ ದುರಸ್ತಿ ಮಾಡುತ್ತಿದ್ದರು. ಸದ್ಯ ಸ್ವ-ಉದ್ಯೋಗದ ಮೂಲಕ ಆದಾಯ ಗಳಿಸುವ ಯೋಚನೆಯಲ್ಲಿದ್ದಾರೆ ನಂದನ್ ಮರ್ದಾಳ.

ಶಾಲಾ ದಿನಗಳಲ್ಲಿ ವಿಜ್ಞಾನ  ವಿಷಯಲ್ಲಿ ಆಸಕ್ತಿ ಹೊಂದಿದ್ದ ಈ ಯುವಕ ಅನೇಕ ಮಾಡಲ್ ಗಳನ್ನು ತಯಾರು ಮಾಡಿ ಮಕ್ಕಳಿಗೆ  ನೀಡಿದ್ದಾರೆ. ಯುವಕನ ತಂದೆ  ಗಂಗಾಧರ ಗೌಡ ಕಡಬ ಟೈಮ್ಸ್ ಜೊತೆ ಮಾತನಾಡಿ ಆರ್ಥಿಕ ವಾಗಿ ಹಿಂದುಳಿದ ನಾವು ಕೃಷಿಯನ್ನು ನೆಚ್ಚಿಕೊಂಡಿದ್ದೆವು. ಅಡಿಕೆ ತೋಟಕ್ಕೆ ಮದ್ದು ಸಿಂಪಡಿಸಲು ಎರಡು ದಿನಬೇಕಾಗಿತ್ತು ,ಈಗ ಒಂದೇ ದಿನದಲ್ಲಿ ಮದ್ದು ಬಿಡಲು ಸಾಧ್ಯವಾಗಿದೆ.ಪ್ರತಿ ವರ್ಷ ಎಂಟು ಕೆ.ಜಿ ಮದ್ದು ಬೇಕಾಗಿತ್ತು  ಈ ಬಾರಿ ಆರು ಕೆ.ಜಿ ಮದ್ದಿನಲ್ಲಿ ತೋಟಕ್ಕೆ ಮದ್ದು ಸಿಂಪಡಿಸಲಾಗಿದೆ . ಸಮಯ ಮತ್ತು ಹಣ ಎರಡೂ ಉಳಿತಾಯವಾಗಿದೆ ಎನ್ನುತ್ತಾರೆ.ಗಂಗಾಧರ ಎಂ ಗೌಡ ಮತ್ತು ನಿರ್ಮಲ ದಂಪತಿಯ ಪುತ್ರನಾಗಿರುವ  ನಂದನ್  ಹೆತ್ತವರ ಮತ್ತು ಆಪ್ತರ ಪ್ರೋತ್ಸಾಹ ದಿಂದ ಈ  ಆವಿಷ್ಕಾರ ಮಾಡಿದ್ದಾರೆ.

970×90