ಪೆರಾಬೆ ಗ್ರಾಮದ ಇಡಾಳದಲ್ಲಿ ಸರ್ಕಾರಿ ಜಾಗ ಆಕ್ರಮಿಸಿದ ವ್ಯಕ್ತಿ, ಕಡಬ ತಹಶಿಲ್ದಾರ್ ಶಾಮಿಲಾಗಿರುವ ಬಗ್ಗೆ ಶಂಕೆ-ತೆರವುಗೊಳಿಸದಿದ್ದರೆ ಪ್ರತಿಭಟನೆ- ದಲಿತ್ ಸೇವಾ ಸಮಿತಿ

ಪೆರಾಬೆ ಗ್ರಾಮದ ಇಡಾಳದಲ್ಲಿ ಸರ್ಕಾರಿ ಜಾಗ ಆಕ್ರಮಿಸಿದ ವ್ಯಕ್ತಿ, ಕಡಬ ತಹಶಿಲ್ದಾರ್ ಶಾಮಿಲಾಗಿರುವ ಬಗ್ಗೆ ಶಂಕೆ-ತೆರವುಗೊಳಿಸದಿದ್ದರೆ ಪ್ರತಿಭಟನೆ- ದಲಿತ್ ಸೇವಾ ಸಮಿತಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳದಲ್ಲಿ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿರುವ ವಿಚಾರದಲ್ಲಿ ಪುತ್ತೂರು ಸಹಾಯಕ ಆಯುಕ್ತರು ಯಥಾಸ್ಥಿತಿ ಆದೇಶ ನೀಡಿದ್ದರೂ ವ್ಯಕ್ತಿಯೊಬ್ಬರು ಆ ಜಾಗದಲ್ಲಿ ಕೃಷಿ ಮಾಡುತ್ತಾ ಬಂದಿದ್ದಾರೆ ಇದನ್ನು ತಕ್ಷಣ ತೆರವು ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ದಲಿತ್ ಸೇವಾ ಸಮಿತಿ ಎಚ್ಚರಿಸಿದೆ.

ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡ್ ಶುಕ್ರವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿ ಕೃಷಿ ಮಾಡುತ್ತಿರುವ ಬಗ್ಗೆ ಕಡಬ ತಹಶಿಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿದ್ದಾರೆ್ ಎಂದು ಆರೋಪಿಸಿದರು.

ಪೆರಾಬೆ ಗ್ರಾಮದ ಇಡಾಳ ಎಂಬಲ್ಲಿ ಬಾಲಕೃಷ್ಣ ಪೂಜಾರಿ ಎಂಬವರು ಸ. ನಂ ೨ಪಿ೨ ರಲ್ಲಿ ೧.೦೬ ಎಕ್ರೆ , ೧೪ಪಿ೧ ರಲ್ಲಿ ೦.೧೯ ಎಕ್ರೆ, ಹಾಗೂ ೧೫೭-೧ಎಪಿ೨ ರಲ್ಲಿ ೦.೭೦ ಎಕ್ರೆ ಸುಮಾರು ಎರಡು ಎಕ್ರೆ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಜಾಗವನ್ನು ಪ,ಜಾತಿ ಪಂಗಡದವರಿಗೆ ನಿವೇಶನಕ್ಕೆ ಮೀಸಲಿಡಬೇಕೆಂದು ಈ ಹಿಂದೆಯೇ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಇದು ನನ್ನ ಕುಮ್ಕಿ ಭೂಮಿ ಎಂದು ಹೇಳಿ ಬಾಲಕೃಷ್ಣ ಪೂಜಾರಿಯವರು ಅತಿಕ್ರಮಣ ಮಾಡಿದ್ದರು. ಈ ಬಗ್ಗೆ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದಾಗ ಕಂದಾಯ ಅಧಿಕಾರಿಗಳು ಸ್ಥಳ ತನಿಖೆ ಸರ್ವೆ ಮಾಡಿ ಈ ಜಾಗ ಸರಕಾರಿ ಜಾಗವೆಂದು ದೃಢಪಡಿಸಿದ್ದಾರೆ. ಈ ಬಗ್ಗೆ ಪುತ್ತೂರು ಸಹಾಯಕ ಆಯುಕ್ತರು ಇದು ಸರಕಾರಿ ಜಾಗವೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಜಾಗದಲ್ಲಿ ಯಾವುದೇ ಕೃಷಿ ಹುಟ್ಟುವಳಿ ಮಾಡದೆ ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂದು ಆದೇಶ ನೀಡಿದ್ದಾರೆ.

ಈ ಆದೇಶಕ್ಕೆ ಕಿಮ್ಮತ್ತು ನೀಡದೆ ಅಕ್ರಮಿತ ವ್ಯಕ್ತಿ ರಾಜಾರೋಷವಾಗಿ ಕೃಷಿ ಮಾಡುತ್ತಿದ್ದಾರೆ. ಯಥಾಸ್ಥಿತಿ ಆದೇಶವಿದ್ದರೂ ಕೃಷಿ ಮಾಡುತ್ತಿರುವ ಬಗ್ಗೆ ಕಡಬ ಕಡಬ ತಹಶಿಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಇದರಿಂದಾಗಿ ಅಕ್ರಮಿತ ವ್ಯಕ್ತಿಯೊಂದಿಗೆ ತಹಶಿಲ್ದಾರ್ ಶಾಮಿಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ತಕ್ಷಣ ಅಕ್ರಮಿತ ಸ್ಥಳದ ಕೃಷಿ ಹುಟ್ಟುವಳಿಯನ್ನು ತೆರವು ಮಾಡಲು ಆದೇಶ ಮಾಡಿ ಈ ಜಮೀನನ್ನು ಪ.ಜಾತಿ, ಪಂಗಡದವರಿಗೆ ಮೀಸಲಿಡಲು ಕ್ರಕೈಗೊಳ್ಳಬೇಕು ಎಂದು ಅಗ್ರಹಿಸಿ ಸೇಸಪ್ಪ ಬೆದ್ರಕಾಡು ಇನ್ನು ಹದಿನೈದು ದಿನದ ಒಳಗೆ ಕ್ರಮಕೈಗೊಳ್ಳದಿದ್ದರೆ ಪುತ್ತೂರು ತಹಶಿಲ್ದಾರ್ ಕಛೇರಿ ಎದುರು ಪ್ರತಿಭಟನೆ ಮಾಲಾಗುವುದು ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಣ್ಣಿ ಎಲ್ತಿಮಾರ್, ಕಡಬ ತಾಲೂಕು ಅಧ್ಯಕ್ಷ ಕೇಶವ ಕುಪ್ಲಾಜೆ, ಪುತ್ತೂರು ತಾಲೂಕು ಅಧ್ಯಕ್ಷ ಬಿ.ಕೆ. ಅಣ್ಣಪ್ಪ ಕರೆಕ್ಕಾಡು ಹಾಗೂ ಸದಾಶಿವ ಇಡಾಳ ಉಪಸ್ಥಿತರಿದ್ದರು.

970×90