ಕಾಣಿಯೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಮೆಡಿಕಲ್ ಕಿಟ್ ವಿತರಣೆ

ಕಾಣಿಯೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಮೆಡಿಕಲ್ ಕಿಟ್ ವಿತರಣೆ

ಕಡಬ ಟೈಮ್ಸ್,ಕಾಣಿಯೂರು: ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ವತಿಯಿಂದ ಕೊರೋನಾ ಜಾಗೃತಿ ಕಾರ್ಯಕ್ರಮ ಶುಕ್ರವಾರ ಭಜನಾ ಮಂದಿರದಲ್ಲಿ ನಡೆದಿದೆ.

ಆಯುಷ್ ಇಲಾಖೆಯ ವೈದ್ಯರಾದ ರವಿಶಂಕರ್ ರವರು ಕೊರೋನದ ಬಗ್ಗೆ ಮಾಹಿತಿ ನೀಡಿ ಜನರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮತ್ತು ಸೋಂಕು ತಡೆಯಲು ಪಾಲಿಸಬೇಕಾದ ಸಲಹೆಗಳನ್ನು ನೀಡಿದರು.

ಡಾ. ಸಂದ್ಯಾ ಉದಯರವರು ಅಶಾಕಾರ್ಯಕರ್ತೆಯರಿಗೆ ಆಯುಷ್ ಫೆಡರೇಶನ್ ವತಿಯಿಂದ ನೀಡಲಾದ ಮೆಡಿಕಲ್ ಕಿಟ್ ವಿತರಿಸಿದರು. ಭಜನಾ ಮಂಡಳಿಯ ಗೌರವ ಅಧ್ಯಕ್ಷ ಚಿದಾನಂದ ಉಪಧ್ಯಾಯ ಕಲ್ಪಡ, ಅಧ್ಯಕ್ಷ ವಾಸುದೇವ ನಾಯ್ಕ್ ತೋಟ ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ , ಕಾರ್ಯದರ್ಶಿ ಜಯಂತ ಅಬೀರ ಹಾಜರಿದ್ದರು.

970×90