ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವು; ಕೊರೊನಾ ಶಂಕೆ ಜನರಲ್ಲಿ ಆತಂಕ!

ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ  ವ್ಯಕ್ತಿ ಸಾವು; ಕೊರೊನಾ ಶಂಕೆ ಜನರಲ್ಲಿ ಆತಂಕ!

ಕಡಬ ಟೈಮ್ಸ್, , ಬೆಳ್ತಂಗಡಿ:   ತಾಲೂಕಿನ ಪಡಂಗಡಿ ಗ್ರಾಮದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ 55 ರ ಹರೆಯದ ವ್ಯಕ್ತಿಯೊಬ್ಬರು  ಶುಕ್ರವಾರ ಸಾವನ್ನಪ್ಪಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

ಕೇರಳ ಮೂಲದ ವ್ಯಕ್ತಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡು ಪಡಂಗಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಕಳೆದೆರಡು ದಿನಗಳಿಂದ ತೀವ್ರ ತರಹದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಶುಕ್ರವಾರ ಮನೆಯ ಜಗುಲಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದ್ದು,  ಮೃತದೇಹವನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ಪಂಚಾಯತ್ಗೆ ಮಾಹಿತಿ ನೀಡಿದ್ದಾರೆ.  ಬಳಿಕ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಿದೆ. ಮೃತದೇಹವನ್ನು ಸಾಗಿಸಲು ಯಾವುದೇ ಅಂಬ್ಯುಲೆನ್ಸ್ ಲಭಿಸದೇ ಇದ್ದಾಗ ಶಾಸಕ ಹರೀಶ್ ಪೂಂಜ ಅವರಿಗೆ ಮಾಹಿತಿ ನೀಡಿದ್ದು, ತಕ್ಷಣ ಅಂಬ್ಯುಲೆನ್ಸ್ ತರಿಸುವಲ್ಲಿ ನೆರವಾಗಿದ್ದಾರೆ.

ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ತಂದು ಮಂಗಳೂರಿಗೆ ಸಾಗಿಸಲಾಗಿದ್ದು, ಶನಿವಾರ ಕೋವಿಡ್ ವರದಿ ಬರುವ ನಿರೀಕ್ಷೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

970×90