ನೆಲ್ಯಾಡಿ-ಮಾದೇರಿ ರಸ್ತೆ ಅಭಿವೃದ್ಧಿ|ನಮ್ಮ ಗ್ರಾಮ-ನಮ್ಮ ರಸ್ತೆ’ಯೋಜನೆಗೆ ಸೇರ್ಪಡೆ – ಶಾಸಕ ಎಸ್.ಅಂಗಾರ

ನೆಲ್ಯಾಡಿ-ಮಾದೇರಿ ರಸ್ತೆ ಅಭಿವೃದ್ಧಿ|ನಮ್ಮ ಗ್ರಾಮ-ನಮ್ಮ ರಸ್ತೆ’ಯೋಜನೆಗೆ ಸೇರ್ಪಡೆ – ಶಾಸಕ ಎಸ್.ಅಂಗಾರ

ಕಡಬ ಟೈಮ್ಸ್, ನೆಲ್ಯಾಡಿ:ಕಡಬ ತಾಲೂಕಿನ ನೆಲ್ಯಾಡಿ-ಮಾದೇರಿ ರಸ್ತೆಯ ನೆಲ್ಯಾಡಿ ಗಾಂಧಿ ಮೈದಾನದ ಸಮೀಪ ಸುಳ್ಯ ಶಾಸಕರ  20 ಲಕ್ಷ ರೂ.ಅನುದಾನದಲ್ಲಿ ನಡೆಯುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.

ಸುಳ್ಯ ವಿಧಾನ ಸಭಾ ಕ್ಷೇತ್ರದ  ಶಾಸಕ ಎಸ್.ಅಂಗಾರರವರು ಗುದ್ದಲಿಪೂಜೆ ನೆರವೇರಿಸಿದರು.  ಬಳಿಕ ಮಾತನಾಡಿ ನೆಲ್ಯಾಡಿ-ಮಾದೇರಿ ರಸ್ತೆ ’ನಮ್ಮ ಗ್ರಾಮ-ನಮ್ಮ ರಸ್ತೆ ’ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕೆಲಸ ಆಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರೂ ಆದ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸದಸ್ಯರಾದ ಲಕ್ಷ್ಮೀನಾರಾಯಣ ರಾವ್, ಮಹಾಬಲ ಪಡುಬೆಟ್ಟು, ಎಪಿಎಂಸಿ ಸದಸ್ಯ, ಜಿ.ಪಂ.ಮಾಜಿ ಸದಸ್ಯರೂ ಆದ ಬಾಲಕೃಷ್ಣ ಬಾಣಜಾಲು, ಬಿಜೆಪಿ ನೆಲ್ಯಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

970×90