ಕಡಬ: ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ  ಮನವಿ

ಕಡಬ: ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ  ಮನವಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಆಗ್ರಹಿಸಿ ಕಡಬ ತಹಶೀಲ್ದಾರ್  ಕಚೇರಿ ಮುಂದೆ ಹಿಂದೂ ಜಾಗರಣ ವೇದಿಕೆ ವತಿಯಿಂದ  ಹಕ್ಕೊತ್ತಾಯ  ಪ್ರತಿಭಟನೆ ಗುರುವಾರ  ನಡೆಯಿತು.

ಸಾರ್ವಜನಿಕ ಸ್ಮಶಾನ ಅವ್ಯವಸ್ಥೆಯಿಂದ ಕೂಡಿದ್ದು ಇಲ್ಲಿ ಶವ ಸಂಸ್ಕಾರಕ್ಕೆ ತೊಂದರೆಯಾಗಿದೆ, ಈ ಸ್ಮಶಾನವನ್ನು ಕೂಡಲೇ ಅಭಿವೃದ್ದಿಪಡಿಸುವಂತೆ ಆಗ್ರಹಿಸಲಾಯಿತು. ಅಲ್ಲದೆ ಕಡಬ ತಹಸೀಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಡಬ ತಾಲೂಕು ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಮಲ್ಲೇಶ್ ಆಲಂಕಾರು, ಕನರ್ಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಶೆಟ್ಟಿ ಕಡಬ, ಪುತ್ತೂರು ಜಿಲ್ಲಾ ಉಪಾಧ್ಯಕ್ಷ ವೆಂಕಟ್ರಮನ ಕುತ್ಯಾಡಿ, ಪುತ್ತೂರು ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ಮೋಹನ್ ಕೊಲ, ಹಿಂಜಾವೇ ತಾಲೂಕು ಕಾರ್ಯದರ್ಶಿ ಜಿನಿತ್ ಮರ್ದಾಳ ,ನಿಧಿ ಪ್ರಮುಖ್ ದೇವಿಪ್ರಸಾದ್, ಪ್ರಮುಖರಾದ ಪ್ರಮೋದ್ ರೈ ನಂದುಗುರಿ, ನಿತ್ಯಾನಂದ ಮೆಲ್ಮನೆ ಹಾಗೂ ಹಿಂಜಾವೇ ಆಲಂಕಾರು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

970×90