ಕಡಬ ಪಟ್ಟಣ:ಅವ್ಯವಸ್ಥೆಯಿಂದ ಕೂಡಿರುವ  ಸ್ಮಶಾನಕ್ಕೆ ನೂತನ ಪ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಭೇಟಿ,ಪರಿಶೀಲನೆ

ಕಡಬ ಪಟ್ಟಣ:ಅವ್ಯವಸ್ಥೆಯಿಂದ ಕೂಡಿರುವ  ಸ್ಮಶಾನಕ್ಕೆ ನೂತನ ಪ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಭೇಟಿ,ಪರಿಶೀಲನೆ

ಕಡಬ ಟೈಮ್ಸ್ ,ಪಟ್ಟಣ ಸುದ್ದಿ: ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ    ಸಾರ್ವಜನಿಕ ಸ್ಮಶಾನ ಅವ್ಯವಸ್ಥೆಯಿಂದ ಕೂಡಿದ್ದು ನೂತನ ಪ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರುಣ್.ಕೆ ಅವರು ತನ್ನ ಸಿಬ್ಬಂದಿಗಳೊಂದಿಗೆ ಸಾರ್ವಜನಿಕ ಸ್ಮಶಾನಕ್ಕೆ ಭೇಟಿ ನೀಡಿ  ಮಾಹಿತಿ ಕಲೆ ಹಾಕಿದ್ದಾರೆ.

ಅವ್ಯವಸ್ಥೆಯಿಂದ ಕೂಡಿರುವ ಈ ಸ್ಮಶಾನದ ಕುರಿತು ಮಾಧ್ಯಮಗಳು ಹಲವು ವರದಿಗಳನ್ನು ಬಿತ್ತರಿಸಿತ್ತು.ಇದರ ಬೆನ್ನಲ್ಲೇ  ಗುರುವಾರ ಕಡಬ ತಾಲೂಕು ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಮಲ್ಲೇಶ್ ಆಲಂಕಾರು ನೇತೃತ್ವದಲ್ಲಿ ಸ್ಮಶಾನ ಅಭಿವೃದ್ದಿಯನ್ನು ಆಡಳಿತ ವರ್ಗ ತೀವ್ರ ನಿರ್ಲಕ್ಷಿಸುತ್ತಿರುವುದರ ಬಗ್ಗೆ  ಕಡಬ ತಹಸೀಲ್ದಾರ್ ಮತ್ತು ಕಡಬ ಪ.ಪಂ  ಮುಖ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿತ್ತು.

ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ  ಕೂಡಲೇ  ಛಾವಣಿ ಮತ್ತು ಶವ ಸಂಸ್ಕಾರದ ವ್ಯವಸ್ಥೆಗಳನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಮಾಧ್ಯಮ ಮಿತ್ರರಿಗೆ  ಹೇಳಿದರು. ಹೊಸ ಅಧಿಕಾರಿಯ ಶೀಘ್ರ ಸ್ಪಂದನೆಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

970×90