ಕಡಬ ಟೈಮ್ಸ್ ವಿಶೇಷ:ಭತ್ತದ ನಾಟಿ ಶುರು, ಕಡಬ ಪ್ರದೇಶದಲ್ಲಿ MO4 5 ಕ್ವಿಂಟಲ್ ಮತ್ತು ಜ್ಯೋತಿ ತಳಿ 4.5 ಕ್ವಿಂಟಲ್ ಭತ್ತ ಬೀಜ ವಿತರಣೆ

ಕಡಬ ಟೈಮ್ಸ್ ವಿಶೇಷ:ಭತ್ತದ ನಾಟಿ ಶುರು, ಕಡಬ ಪ್ರದೇಶದಲ್ಲಿ MO4  5 ಕ್ವಿಂಟಲ್ ಮತ್ತು ಜ್ಯೋತಿ ತಳಿ 4.5 ಕ್ವಿಂಟಲ್ ಭತ್ತ ಬೀಜ ವಿತರಣೆ

ಕಡಬ ಟೈಮ್ಸ್ ,ವಿಶೇಷ ಸುದ್ದಿ:ಕಡಬ ತಾಲೂಕಿನಾದ್ಯಂತ ಭತ್ತದ ಕೃಷಿ ಈಗಷ್ಟೇ ಚುರುಕುಗೊಂಡಿದ್ದು, ಎಲ್ಲ ಕಡೆ ನಾಟಿ ಹಾಗೂ ನಾಟಿಯ ಪೂರ್ವದ ಕೆಲಸಗಳು ಪ್ರಗತಿಯಲ್ಲಿವೆ. ಪ್ರತಿ ವರ್ಷದ ವಾಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದರೂ ಸಮರ್ಪಕ ಮಳೆ ಎರಡನೇ ವಾರದಲ್ಲಿ   ಆರಂಭವಾದ ಕಾರಣ ಬೇಸಾಯದ ಆರಂಭ ಕೂಡ ತಡವಾಗಿದೆ.

ನೆಲ್ಯಾಡಿ,ಕುಟ್ರುಪ್ಪಾಡಿ, ಆಲಂಕಾರು,ಕಡಬ, ಸವಣೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಾಟಿ ಕಾರ್ಯ ಪ್ರಗತಿಯಲ್ಲಿದ್ದರೆ ಇನ್ನು ಕೆಲ ಕಡೆಗಳಲ್ಲಿ ಮುಕ್ತಾಯಗೊಂಡಿದೆ. ಕಡಬ ಪ್ರದೇಶದಲ್ಲಿ ಸರಕಾರರ ಕೃಷಿ ಇಲಾಖೆಯಿಂದ  ಮಾನ್ಯತೆ ಪಡೆದ ಎಂ.ಒ4,(ಭದ್ರಾ) ಜ್ಯೋತಿ,ತಳಿಗಳನ್ನು ಬಿತ್ತನೆ ಮಾಡಲಾಗುತ್ತಿದೆ.  ಕರಾವಳಿಯ ಹವಾಮಾನಕ್ಕೆ ಈ ಎರಡು ತಳಿಗಳು ಮತ್ತು ಸ್ಥಳೀಯವಾಗಿರುವ ಕೆಲವು ತಳಿಗಳು ಸೂಕ್ತವಾಗಿದ್ದು ಕಡಬ ತಾಲೂಕಿನಲ್ಲಿ ಎಂಒ 4  5 ಕ್ವಿಂಟಲ್ ಮತ್ತು ಜ್ಯೋತಿ ತಳಿ ಯಲ್ಲಿ 4.5 ಕ್ವಿಂಟಲ್ ಭತ್ತದ ಬೀಜ ವಿತರಣೆ ಆಗಿದೆ .

ಈ ಬಾರಿ ರೈತರು ಹೆಚ್ಚಾಗಿ ಸ್ಥಳೀಯವಾಗಿ ದೊರೆಯುವ ಭತ್ತದ ತಳಿಗಳಿಗೆ  ಆದ್ಯತೆ ನೀಡಿರುವುದು ಗಮನಕ್ಕೆ ಬಂದಿದೆ.  ಗ್ರಾಮೀಣ ಪ್ರದೇಶದಲ್ಲಿ ಲಭ್ಯವಾಗುವ ಇಂತಹ ಅನೇಕ ತಳಿಗಳಲ್ಲಿ ಭತ್ತದ ಇಳುವರಿ ಕಡಿಮೆಯಾಗಿದ್ದರೂ  ಹುಲ್ಲಿನ ಪ್ರಮಾಣ ಜಾಸ್ತಿ ಇರುತ್ತದೆ. ಭತ್ತ ನಾಟಿ ಕುರಿತು ಕಡಬ ಟೈಮ್ಸ್ ಗೆ ಮಾಹಿತಿ ನೀಡಿರುವ ಕಡಬದ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಅವರು ಮಾನ್ಯತೆ ಪಡೆದ ಭತ್ತದ ಬೀಜಕ್ಕೆ ಕಿಲೋ ಒಂದಕ್ಕೆ ಎಂಟು ರೂಪಾಯಿ ಸಬ್ಸಿಡಿ ದೊರೆಯುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಭತ್ತದ ಬೀಜ ಬಿತ್ತನೆ ಮಾಡಿರುವುದಕ್ಕೆ ಇದು ಅನ್ವಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

970×90