ಕಡಬ :ಜೀವ ಪಣಕ್ಕಿಟ್ಟು ಕೆಲಸ ನಿರ್ವಹಿಸುತ್ತಿರುವ ಲೈನ್ ಮ್ಯಾನ್ ಗಳು

ಕಡಬ :ಜೀವ ಪಣಕ್ಕಿಟ್ಟು ಕೆಲಸ ನಿರ್ವಹಿಸುತ್ತಿರುವ ಲೈನ್ ಮ್ಯಾನ್ ಗಳು

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಲಾಕ್ ಡೌನ್ ನಿಯಮ ಜೊತೆಗೆ ಮಳೆಗಾಲದ ಅವಾಂತರಗಳ ಮಧ್ಯೆ ಮೆಸ್ಕಾಂ ಸಿಬ್ಬಂದಿಗಳು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.

ಕಡಬ ಮೆಸ್ಕಾಂ ನ ಅಧಿಕಾರಿಗಳ ನಿರ್ದೇಶನದಂತೆ ಲೈನ್ ಮ್ಯಾನ್ ಗಳು ಮೆಸ್ಕಾಂ ವ್ಯಾಪ್ತಿಯ ವಿವಿಧೆಡೆ ಸಮಯ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಹಲವು ಕಡೆ ತಂತಿ ಬದಲಾವಣೆ,ಹೊಸ ಕಂಬ ನಿರ್ವಹಣೆ, ಲೈನ್ ಗಳಿಗೆ ಅಡ್ಡವಾಗುವ ಮರದ ಕೊಂಬೆಗಳನ್ನು ತೆರೆವು ಮಾಡುವ ಕಾರ್ಯ ನಡೆಯುತ್ತಿದೆ.

ಸರ್ಕಾರ ನೀಡಿದ ಸೀಮಿತ ಸೌಲಭ್ಯಗಳ ನಡುವೆ  ಗರಿಷ್ಟ ಮಟ್ಟದ ಸೇವೆ ನೀಡಲು  ಮೆಸ್ಕಾಂ  ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇತ್ತಿಚೇಗೆ ಕೆಲ ಕಡೆಗಳಲ್ಲಿ ವಿದ್ಯುತ್ ಅವಘಡದಿಂದ ಲೈನ್ ಮ್ಯಾನ್ ಗಳು ಪ್ರಾಣ ಕಳೆದುಕೊಂಡಿದ್ದಾರೆ. ಮುಂಜಾಗೃತ ಕ್ರಮವಾಗಿ ಮೆಸ್ಕಾಂ ಕಚೇರಿ ಮತ್ತು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ  ಕೋವಿಡ್ -೧೯ ನಿಯಮವನ್ನು ಸಂಪೂರ್ಣವಾಗಿ ಪಾಲನೆ ಮಾ್ಡುತ್ತಿದ್ದಾರೆ.

970×90