ಕಡಬ ಪ್ರದೇಶದ ಅಡಿಕೆ ತೋಟಗಳಿಗೆ ವಿಜ್ಞಾನಿಗಳ ತಂಡ ಭೇಟಿ , ಪರಿಶೀಲನೆ

ಕಡಬ ಪ್ರದೇಶದ  ಅಡಿಕೆ ತೋಟಗಳಿಗೆ ವಿಜ್ಞಾನಿಗಳ ತಂಡ  ಭೇಟಿ , ಪರಿಶೀಲನೆ

ಕಡಬ ಟೈಮ್ಸ್, ಪಟ್ಟಣ ಸುದ್ದಿ:
ಅಡಿಕೆ ತೋಟಗಳಲ್ಲಿ ಎಳೆ ಅಡಿಕೆ ಬೀಳುವುದು ಹಾಗೂ ಸಿಂಗಾರ ಒಣಗುವ ಸಮಸ್ಯೆ ಈ ಬಾರಿ ವಿಪರೀತವಾಗಿ ದ.ಕ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಡುಬಂದಿದ್ದು ವಿಜ್ಞಾನಿಗಳ ತಂಡ ಶುಕ್ರವಾರ ಸುಳ್ಯ, ಪುತ್ತೂರು, ಕಡಬ ಪ್ರದೇಶದ ಕೆಲವು ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ 2 ವರ್ಷಗಳಿಂದ ಈ ಸಮಸ್ಯೆ ಇರುವ ಬಗ್ಗೆ ಅಡಿಕೆ ಬೆಳೆಗಾರರು ತಮ್ಮ ಸಮಸ್ಯೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ತಿಳಿಸಿತ್ತು.‌ಸಂಘವು ವಿಟ್ಲದ ಸಿಪಿಸಿಆರ್ ಐ ವಿಜ್ಞಾನಿಗಳ ಗಮನಕ್ಕೆ ತಂದು, ಈ ಬಗ್ಗೆ ಸೂಕ್ತವಾದ ಅದ್ಯಯನ ಹಾಗೂ ಪರಿಹಾರ ಮಾರ್ಗ ಅಗತ್ಯವಾಗಿದೆ ಎಂದು ಅಡಿಕೆ ಬೆಳೆಗಾರರ ಪರವಾಗಿ ತಿಳಿಸಿತ್ತು.

ಇದಕ್ಕೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ಕೆಲ ತೋಟಗಳಿಗೆ ಆಗಮಿಸಿ
ಅಡಿಕೆ ಸ್ಯಾಂಪಲ್ ಗಳು ಹಾಗೂ ಅಧ್ಯಯನ ನಡೆಸಿದ್ದಾರೆ.

ವಿಜ್ಞಾನಿಗಳ ತಂಡದಲ್ಲಿ ಸಸ್ಯ ಸಂತಾನೋತ್ಪತ್ತಿ ವಿಜ್ಞಾನಿ ಡಾ. ಎನ್. ಆರ್. ನಾಗರಾಜ, ಕೃಷಿ ಕೀಟಶಾಸ್ತ್ರ ವಿಜ್ಞಾನಿ ಡಾ. ಶಿವಾಜಿ ಹೌಸ್ರಾವ್ ಥೂಬ್, ಸಸ್ಯ ರೋಗಶಾಸ್ತ್ರ ವಿಜ್ಞಾನಿ ಡಾ. ಆರ್. ಥವಾ ಪ್ರಕಾಶ ಪಾಂಡಿಯನ್, ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ಸಂತೋಷ್ ಕುಮಾರ್ ಭಾಗವಹಿಸಿದ್ದರು.

ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ, ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮೊದಲಾದವರು ಜೊತೆಗಿದ್ದರು.

970×90