ಸವಣೂರು ಸಂಪೂರ್ಣ ಸ್ತಬ್ದ,ಪೊಲೀಸರಿಂದ ಬಿಗಿ ಬಂದೋಬಸ್ತ್

ಸವಣೂರು ಸಂಪೂರ್ಣ ಸ್ತಬ್ದ,ಪೊಲೀಸರಿಂದ ಬಿಗಿ ಬಂದೋಬಸ್ತ್

ಕಡಬ ಟೈಮ್ಸ್, ಸವಣೂರು: ಕಡಬ ತಾಲೂಕು ವ್ಯಾಪ್ತಿಯ ಬೆಳ್ಳಾರೆ ಪೋಲೀಸ್ ಠಾಣೆ ವ್ಯಾಪ್ತಿಗೆ ಬರುವ ಸವಣೂರು ಪೇಟೆ ಇಂದು ಸಂಪೂರ್ಣ ಲಾಕ್ ಡೌನ್ ಆಗಿದೆ.

ಇಲ್ಲಿನ ಗ್ರಾಮ ಪಂಚಾಯತ್. ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯು ಕರೋನಾ ನಿಯಂತ್ರಣ ಕ್ಕಾಗಿ ಶ್ರಮಿಸುತ್ತಿದೆ‌. ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ಸಾರ್ವಜನಿಕರೂ ಸಹಕಾರ ನೀಡುತ್ತಿದ್ದಾರೆ.

‌‌‌‌‌ಬೆಳ್ಳಾರೆ ಠಾಣೆಯ ಎಸ್ ಐ ಅಂಜನೇಯ ರೆಡ್ಡಿ ಮತ್ತು ಸಿಬ್ಬಂದಿಗಳು ಸವಣೂರು ಪ್ರದೇಶ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕಾರ್ಯವನ್ನು ಮಾಡುವ ಮೂಲಕ ಸರ್ಕಾರದ ಆದೇಶವನ್ನು ಜಾರಿಗೆ ತಂದಿದ್ದಾರೆ.

970×90