ಕೋಡಿಂಬಾಳ:ಅಯ್ಯಪ್ಪ ಸ್ವಾಮಿ ಮಂದಿರದ ತಡೆಗೋಡೆ  ಕುಸಿತ lಶಾಸಕ ಎಸ್. ಅಂಗಾರ ಭೇಟಿ

ಕೋಡಿಂಬಾಳ:ಅಯ್ಯಪ್ಪ ಸ್ವಾಮಿ ಮಂದಿರದ ತಡೆಗೋಡೆ  ಕುಸಿತ lಶಾಸಕ ಎಸ್. ಅಂಗಾರ ಭೇಟಿ

ಕಡಬ ಟೈಮ್ಸ್, ಕೋಡಿಂಬಾಳ: ಕಳೆದ ಕೆಲ ದಿನಗಳಿಂದ ನಿರಂತರ ಸುರಿದ ಮಳೆಗೆ ಕೋಡಿಂಬಾಳದ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ತಡೆಗೋಡೆ  ಕುಸಿದಿದ್ದು  ಸುಳ್ಯ ವಿಧಾನ ಸಭಾ ಶಾಸಕ ಎಸ್. ಅಂಗಾರ ಶುಕ್ರವಾರ  ಭೇಟಿ ನೀಡಿ ವೀಕ್ಷಿಸಿದರು.

ಶ್ರೀ ಅಯ್ಯಪ್ಪ ಮಂದಿರದ ಪದಾಧಿಕಾರಿಗಳು ಮತ್ತು ಊರಿನ ಸಮಾನ ಮನಸ್ಕರು  ಶಾಶ್ವತ ತಡೆಗೋಡೆ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿ  ಅನುದಾನ ಲಭ್ಯತೆ ನೋಡಿಕೊಂಡು  ಶಾಶ್ವತ ತಡೆಗೋಡೆ ನಿರ್ಮಿಸಲು ಅನುದಾನ ನೀಡುವ ಭರವಸೆ ನೀಡಿದರು.  ಈ ಸಂದರ್ಭದಲ್ಲಿ  ಕೇಶ್ವ ಗೌಡ ಬೇರಿಕೆ, ಬಾಲಕೃಷ್ಣ ಗೌಡ ಗುಂಡಿಮಜಲು, ಗನೇಶ್ ಕೋಲ್ಪೆ, ಸುರೇಶ್ ಕೋಡಿಂಬಾಳ. ರಘು ನಾಯ್ಕ್ ಕೊಟ್ಟಾರಿ  ಹಾಜರಿದ್ದರು.

970×90