ನೆಲ್ಯಾಡಿ:ಡಿಕೆಶಿ ಪದಗ್ರಹಣ ಸಮಾರಂಭದ ನೇರಪ್ರಸಾರ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ

ನೆಲ್ಯಾಡಿ:ಡಿಕೆಶಿ ಪದಗ್ರಹಣ ಸಮಾರಂಭದ ನೇರಪ್ರಸಾರ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ

ಕಡಬಟೈಮ್ಸ್,ನೆಲ್ಯಾಡಿ : ಕೆಪಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ರವರ ಬೆಂಗಳೂರಿನಲ್ಲಿ ನಡೆದ ಪದಗ್ರಹಣ ಸಮಾರಂಭದ ನೇರ ಪ್ರಸಾರ ಹಾಗೂ ‘ಪ್ರತಿಜ್ಞಾ’ ವಿಧಿ ಕಾರ್ಯಕ್ರಮ ಜು.೨ ರಂದು  ನೆಲ್ಯಾಡಿ ಅಲ್ಫೋನ್ಸಾ ಚರ್ಚ್ನ ಸಭಾಂಗಣದಲ್ಲಿ ನಡೆಯಿತು.

ಕೆಪಿಸಿಸಿ ಸದಸ್ಯ ಕೆ.ಪಿ.ತೋಮಸ್ರವರು ಕಾರ್ಯಕ್ರಮ ಉದ್ಘಾಟಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.  ಬಳಿಕ ಮಾತನಾಡಿದ ಅವರು,. ಡಿ.ಕೆ.ಶಿವಕುಮಾರ್ರವರು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಪಿಸಿಸಿ ಸಾರಥ್ಯ ವಹಿಸುವ ಮೂಲಕ ಈಗ ರಾಜ್ಯದಲ್ಲಿ ಪಕ್ಷ ಬಲವರ್ಧನೆಯ ನೇತೃತ್ವ ವಹಿಸಿಕೊಂಡಿದ್ದಾರೆ. ತಳಮಟ್ಟದಲ್ಲಿ ಅವರ ಕೈ ಬಲಪಡಿಸುವಲ್ಲಿ ನಾವೆಲ್ಲರೂ ಅವರಿಗೆ ಶಕ್ತಿ ತುಂಬಬೇಕಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಮಾಜಿ ಅಧ್ಯಕ್ಷ, ನ್ಯಾಯವಾದಿ, ನೋಟರಿ ವಕೀಲರೂ ಆಗಿರುವ ಇಸ್ಮಾಯಿಲ್ ಸಮಯೋಚಿತವಾಗಿಮಾತನಾಡಿದರು. ನೆಲ್ಯಾಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಸುಕುಮಾರ ಗೌಡ ಪುಚ್ಚೇರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭಕ್ಕೆ ಸಹಕಾರ ನೀಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಸದಸ್ಯ ಎಂ.ಟಿ.ಜೋನ್(ಮೋನ್ಸಿ)ರವರಿಗೆ ಶಾಲು, ಹೂ ನೀಡಿ ಗೌರವಾರ್ಪಣೆ ಮಾಡಲಾಯಿತು.  ಕಾಂಗ್ರೆಸ್ ನೆಲ್ಯಾಡಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಗೌರಿಜಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೀನಾ ಗಡಿಯಲ್ಲಿ ಚೀನಾ ಹಾಗೂ ಭಾರತೀಯ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಗೌರವಾರ್ಥ ಸಭೆಯಲ್ಲಿ ೧ ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.

 

ಕಾಂಗ್ರೆಸ್ ಜಾಲತಾಣ ನೆಲ್ಯಾಡಿ ಗ್ರಾಮ ಸಮಿತಿ ಸಹ ಸಂಯೋಜಕ ಕೆ.ಪಿ.ಅಬ್ರಹಾಂರವರು ಸಂವಿಧಾನ ಪೀಠಿಕೆ ವಾಚಿಸಿದರು. ಕಾಂಗ್ರೆಸ್ ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ನೆಲ್ಯಾಡಿ ಗ್ರಾಮ ಸಮಿತಿ ಸಂಚಾಲಕ ಜೋಸ್ ಕೆ.ಜೆ.,ವಂದಿಸಿದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣ ನೆಲ್ಯಾಡಿ ಗ್ರಾಮ ಸಮಿತಿ ಸಂಯೋಜಕ ಗಂಗಾಧರ ಶೆಟ್ಟಿ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.

970×90