ಕಡಬ:ಕೊರೋನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ ನರ್ಸ್ ಗೆ ತಗುಲಿತು ಕೊರೋನಾ ಸೋಂಕು

ಕಡಬ:ಕೊರೋನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ  ನರ್ಸ್ ಗೆ  ತಗುಲಿತು ಕೊರೋನಾ ಸೋಂಕು

ಕಡಬ ಟೈಮ್ಸ್, ಮರ್ದಾಳ: ಸುಳ್ಯ ಸರಕಾರಿ ಆಸ್ಪತ್ರೆ ಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 102 ನೆಕ್ಕಿಲಾಡಿ ಗ್ರಾಮದ ಮಹಿಳೆಗೆ ಕೊರೋನಾ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ.

ಸುಳ್ಯ ಸರಕಾರಿ ಆಸ್ಪತ್ರೆ ಯಲ್ಲಿ ಕೊರೋನಾ ಸೊಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ಹಿನ್ನಲೆಯಲ್ಲಿ ಆಸ್ಪತ್ರೆ ಯ ದಾದಿಯರ ಗಂಟಲು ದ್ರವ ಪರೀಕ್ಷೆ ಗೆ ಕಳುಹಿಸಲಾಗಿತ್ತು. ಅದರಲ್ಲಿ ಕಡಬದ ನರ್ಸ್ ಗೆ ಸೋಂಕು ಇರುವುದು ದೃಢಪಟ್ಟಿದೆ.

ಇವರು ಸುಳ್ಯದಿಂದ ಪ್ರತಿದಿನ ತನ್ನ ಮನೆಗೆ ಬರುತ್ತಿದ್ದರು. ಈಗಾಗಲೇ 102ನೆಕ್ಕಿಲಾಡಿಯಲ್ಲಿರುವ ಅವರ ನಿವಾಸಕ್ಕೆ ಕಂದಾಯ ಇಲಾಖಾ ಅಧಿಕಾರಿಗಳು, ಆರೋಗ್ಯ ಇಲಾಖೆಯವರು ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ತಯಾರಿ ನಡೆಸಿದ್ದಾರೆ.

970×90