ಸುಬ್ರಹ್ಮಣ್ಯದ ಮುಖ್ಯ ರಸ್ತೆಯಲ್ಲಿ ಮೊಸಳೆಮರಿ ಹಾಜರು!

ಸುಬ್ರಹ್ಮಣ್ಯದ ಮುಖ್ಯ ರಸ್ತೆಯಲ್ಲಿ ಮೊಸಳೆಮರಿ ಹಾಜರು!

 ಕಡಬ ಟೈಮ್ಸ್, ಸುಬ್ರಹ್ಮಣ್ಯ: ಕುಕ್ಕೆ ದೇಗುಲದ   ಮುಖ್ಯ ರಸ್ತೆಯ  ಪೆಟ್ರೋಲ್‌ ಬಂಕ್‌  ಸಮೀಪ ಮಂಗಳವಾರ ಮೊಸಳೆ ಮರಿ ಪತ್ತೆಯಾ​ಗಿದೆ.

ಮಳೆ ಹೆಚ್ಚು ಸುರಿದು ಕುಮಾರಧಾರಾ ನದಿಯಲ್ಲಿ ನೀರು ಹೆಚ್ಚುತ್ತಿದ್ದು ಈ ಕಾರಣದಿಂದಲೇ ಮೊಸಳೆ ಮರಿ ರಸ್ತೆಯಂಚಿಗೆ ಬರುವುದಾಗಿ ಸಾರ್ವಜನಿಕರು ಅಭಿಪ್ರಾಯಿಸಿದ್ದು   ಆತಂಕವನ್ನೂ ವ್ಯಕ್ತಪಡಿಸಿದ್ದಾರೆ

ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡುವುದರಿಂದ  ಜೀವಕ್ಕೆ ಅಪಾಯವೂ ಇದ್ದು  ಪ್ರವಾಸಿಗರಲ್ಲಿ  ಆತಂಕ ಹೆಚ್ಚಾಗಿದೆ.

.ಮೊಸಳೆ ಮರಿ ಗಮನಕ್ಕೆ ಬಂದ ತಕ್ಷಣವೇ ಗ್ರಾಮ ಪಂಚಾಯತ್ ಸದಸ್ಯ ದಿನೇಶ್‌ ಬಿ.ಎನ್‌. ಈ ವಿಚಾರವನ್ನು ಅರಣ್ಯ ಇಲಾಖೆಗೆ ವಿಚಾರ ತಿಳಿಸಿದ್ದಾರೆ. ಆದರೆ ಸಿಬ್ಬಂದಿಗಳು ಬರುವ ಸಂದರ್ಭದಲ್ಲಿ ಅದು ಕಾಣೆಯಾಗಿತ್ತು.

970×90