ಕಡಬ ಟೈಮ್ಸ್ ವಿಶೇಷ :ಕಲಾವಿದನಾಗಿ ಮಿಂಚಬೇಕೆಂಬ ಅದಮ್ಯ ಉತ್ಸಾಹದಲ್ಲಿರುವ ಸುಮಂತ್ ಪೂಜಾರಿ

ಕಡಬ ಟೈಮ್ಸ್ ವಿಶೇಷ :ಕಲಾವಿದನಾಗಿ ಮಿಂಚಬೇಕೆಂಬ ಅದಮ್ಯ ಉತ್ಸಾಹದಲ್ಲಿರುವ ಸುಮಂತ್ ಪೂಜಾರಿ

ಕಡಬ ಟೈಮ್ಸ್ ವಿಶೇಷ :ಸಾಧಿಸಬೇಕೆಂಬ ಛಲ, ಹೃದಯದಲ್ಲಿನ ಅದಮ್ಯ ಉತ್ಸಾಹ, ಕಠಿಣ ಪ್ರಯತ್ನಗಳಿದ್ದಾಗ ಸಾಧನೆ ತನ್ನಿಂತಾನೆ ಸಾಧ್ಯವಾಗುತ್ತದೆ. ಇದೀಗ ಕಡಬದ ಗ್ರಾಮೀಣ ಭಾಗದ  ಯುವಕನೊಬ್ಬ  ತನ್ನ ಸ್ವ ಪ್ರಯತ್ನದಿಂದ ಬಹುಮುಖ ಪ್ರತಿಭೆಯ ಮೂಲಕ ಪರಿಚಿತರಾಗುತ್ತಿದ್ದಾರೆ.

ನೃತ್ಯ, ಯಕ್ಷಗಾನ, ಚಿತ್ರ ಕಲೆ, ಪ್ರಬಂಧ, ಭಾಷಣ, ನಿರೂಪಣೆ , ಹಾಡುಗಾರಿಕೆ  ಹೀಗೆ ಎಲ್ಲ ರಂಗದಲ್ಲೂ ತನ್ನನ್ನು  ತೊಡಗಿಸಿಕೊಂಡು ಬೆಳೆಯುತ್ತಿರುವ ಯುವ ಕಲಾವಿದನ ಹೆಸರು ಕಡಬ ತಾಲೂಕಿನ ಕುಂತೂರು ಪದವಿನ ಸುಮಂತ್ ಪೂಜಾರಿ. ಕಾಲೇಜಿನ ಕಾರ್ಯಕ್ರಮಗಳಲ್ಲಿ ನಿರೂಪಣೆಯ ಜೊತೆಗೆ ಉತ್ತಮ ಡಾನ್ಸರ್ ಆಗಿ ಸ್ನೇಹಿತ ಬಳಗದಲ್ಲಿ ಹೀರೋ ಆಗಿದ್ದರು . ನೃತ್ಯ ಪ್ರದರ್ಶನ, ಯಕ್ಷಗಾನ ಶೈಲಿಯ ನೃತ್ಯ, ಹೀಗೆ ವಿವಿಧ ಕಲಾ ಪ್ರತಿಭೆ ಅನಾವರಣಕ್ಕಾಗಿ  ಮಡಿಕೇರಿ, ಧರ್ಮಸ್ಥಳ, ಕಡಬ ಸೇರಿದಂತೆ  ಹಲವಾರು ಕಡೆಗಳಲ್ಲಿ ತನ್ನ ಪ್ರತಿಭೆಯ ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದಾರೆ.

ಮಡಿಕೇರಿಯಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿಯೂ ಭಾಗವಹಿಸಿದ ಹೆಗ್ಗಳಿಕೆ ಇವರದು. ತನ್ನ ನಟನೆಗೆ ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿ ಬಳಸಿಕೊಂಡು ಮನೋರಂಜನೆಗಾಗಿ ಹಲವು ವೀಡಿಯೋಗಳನ್ನು ಬಿಡುಗಡೆಗೊಳಿಸಿದ್ದಾರೆ.

ಇವರ ತಾಯಿ ಶ್ರೀ ಮತಿ ಶಾಂತ ಎ.ಆರ್  ಯಕ್ಷಗಾನ ಭಾಗವತರಾಗಿದ್ದು, ತಾಯಿಯಂತೆಯೇ  ಕಲಾ ರಂಗದಲ್ಲಿ ಮಿಂಚಲು ಪ್ರಯತ್ನಿಸುತ್ತಿದ್ದಾರೆ. ತಂದೆ ಸುಂದರ ಬಂಗೇರ ಮಗನ ಆಸಕ್ತಿಗೆ ಪ್ರೋತ್ಸಾಹ ನೀಡುತ್ತಿದ್ದು  ನಟನೆ ಮತ್ತು  ಮಾಡೆಲಿಂಗ್ ನಲ್ಲಿ ಹೆಸರು ಮಾಡಬೇಕೆಂಬ  ಕನಸನ್ನುಹೊತ್ತು ಸಾಗುತ್ತಿದ್ದಾರೆ ಸುಮಂತ್ ಪೂಜಾರಿ.

ಶಾಲಾ ಕಾಲೇಜಿನಲ್ಲಿ ಅತ್ಯುತ್ತಮ ಅಂಕಗಳಿಸುವ ಮೂಲಕ ಶೈಕ್ಷಣಿಕವಾಗಿ ಮುಂದಿದ್ದ  ಈತ  ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ರಲ್ಲಿ 125 ಅಂಕ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಂತರ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟಾಪರ್ ಆಗಿ ಮಿಂಚಿದರು.

970×90