ಕಡಬ:ಸಹೋದರರ ನಡುವೆ ವಾಗ್ವಾದ lಗುಂಡು ಹಾರಾಟ!

ಕಡಬ:ಸಹೋದರರ ನಡುವೆ ವಾಗ್ವಾದ lಗುಂಡು ಹಾರಾಟ!

ಕಡಬ ಟೈಮ್, ಪಿಜಕ್ಕಳ: ಜಾಗದ ವಿಚಾರಕ್ಕೆ ಸಂಬಂಧಿಸಿ  ಸಹೋದರರ ನಡುವೆ ವಾಗ್ವಾದ ನಡೆದು ಗುಂಡು ಹಾರಾಟ ನಡೆಸಿದ ಘಟನೆ ಕಡಬ ಸಮೀಪದ ಪಿಜಕ್ಕಳದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಉಜಿರುಪಾದೆ ನಿವಾಸಿ ಅಣ್ಣು ನಾಯ್ಕ ಅವರ ಪುತ್ರರಾದ ಕುಶಾಲಪ್ಪ ನಾಯ್ಕ ಮತ್ತು ಬಾಲಕೃಷ್ಣ ಅವರ ನಡುವೆ ಹಲವು ಸಮಯಗಳಿಂದ ಜಾಗದ ವಿಚಾರಕ್ಕೆ ಸಂಬಂಧಿಸಿ ಮನಸ್ತಾಪವಿತ್ತು. ಸೋಮವಾರ ಇದೇ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆದಿದದೆ ಎನ್ನಲಾಗಿದೆ.

ಈ ವೇಳೆ ಕುಶಾಲಪ್ಪ ಎಂಬವರು ಪರವಾನಿಗೆ ಹೊಂದಿರುವ ಕೋವಿಯಿಂದ ಗುಂಡು ಹಾರಿಸಿದ ವೇಳೆ ತಪ್ಪಿಸಿಕೊಂಡು ಪ್ರಾಣಪಾಯದಿಂದ ಪಾರಾಗಿರುವುದಾಗಿ ಬಾಲಕೃಷ್ಣ ಅವರು ದೂರಿದ್ದಾರೆ. ಕುಶಾಲಪ್ಪ ನಾಯ್ಕ್ ಅವರು ಪ್ರತಿದೂರು ನೀಡಿ ಬಾಲಕೃಷ್ಣ ರವರು ನನ್ನ ಕೈಯಿಂದ ಕೋವಿ ಕಸಿದುಕೊಂಡು ನನ್ನತ್ತ ಗುಂಡು ಹಾರಿಸಿರುವುದಾಗಿ ಆರೋಪಿಸಿದ್ದಾರೆ. ಇಬ್ಬರೂ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿ ಬಳಿಕ ಬಿಡುಗಡೆಗೊಂಡಿದ್ದಾರೆ.ಈ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.

970×90