ರೈತ ವಿರೋಧಿ ಕಾನೂನು ಹಿಂಪಡೆಯದಿದ್ದರೆ ಸಂಸತ್ ಗೆ ಮುತ್ತಿಗೆಯ ಎಚ್ಚರಿಕೆ

ರೈತ ವಿರೋಧಿ ಕಾನೂನು ಹಿಂಪಡೆಯದಿದ್ದರೆ  ಸಂಸತ್ ಗೆ ಮುತ್ತಿಗೆಯ ಎಚ್ಚರಿಕೆ

ಕಡಬ ಟೈಮ್ಸ್, ಸುಳ್ಯ :ಭೂ ಸುಧಾರಣಾ ಕಾಯಿದೆ ತಿದ್ದುಪಡಿ, ಎಪಿಎಂಸಿ.ಕಾಯಿದೆ,ವಿದ್ಯುತ್ ವಿತರಣೆ ಯನ್ನು ಖಾಸಗೀಕರಣ ಗೊಳಿಸುವುದು ಮತ್ತು ಸಹಕಾರಿ ಬ್ಯಾಂಕ್ ಗಳನ್ನು ಆರ್ ಬಿ ಐ ವ್ಯಾಪ್ತಿಗೆ ತರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ  ನಡೆಯಿತು.‌

ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯದರ್ಶಿ  ರವಿಕಿರಣ ಪುಣಚ ಇಂದಿನ ದಿನದಲ್ಲಿ ಸರಕಾರಗಳು ರೈತ ವಿರೋಧಿ ನೀತಿಯನ್ನು ಮಾಡುತ್ತಿದೆ. ತಮಗಿಷ್ಟ ಬಂದಂತೆ ಸುಗ್ರಿವಾಜ್ಞೆಗಳನ್ನು ಹೊರಡಿಸುತ್ತಿದೆ.‌ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಭೂಮಿಯನ್ನು ಬಂಡವಾಳ ಶಾಹಿಗಳಿಗೆ ನೀಡುವ ವ್ಯವಸ್ಥಿತ ಹುನ್ನಾರ. ಇದರಿಂದ ರೈತರು ಬೀದಿಗೆ ಬರುವ ಸ್ಥಿತಿ ಇದೆ. ಸರಕಾರ ಹೊರಡಿಸಿರುವ ರೈತ ವಿರೋಧಿ ಆದ್ಯಾದೇಶಗಳನ್ನು ಹಿಂಪಡೆಯದಿದ್ದರೆ ರೈತ ಸಂಘ ಗ್ರಾಮ ಗ್ರಾಮದಲ್ಲಿ ಹೋರಾಟ ಮಾಡಲಿದೆ. ಸಂಸತ್ ಗೂ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಜೆಡಿಎಸ್  ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ,ಆಮ್ ಆದ್ಮಿ ಪಕ್ಷದ ಸಂಚಾಲಕ ಅಶೋಕ್ ಎಡಮಲೆ ಸರ್ಕಾರದ ನೀತಿಯ ವಿರುದ್ದ ಮಾತನಾಡಿ ಯಾವುದೇ ಕಾನೂನು ತರುವಾಗ ಅದರ ಸಾಧಕ – ಬಾಧಕ ಚರ್ಚಿಸಬೇಕು ಎಂದು ಹೇಳಿದರು.

ಬಳಿಕ ತಹಶೀಲ್ದಾರ್ ಮೂಲಕ ತಿದ್ದುಪಡಿ ಕಾಯ್ದೆಗೆ ರೈತರ ಆಕ್ಷೇಪನಾ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು. ರೈತ ಸಂಘದ ಪ್ರಮುಖರಾದ ಲೋಲಜಾಕ್ಷ ಭೂತಕಲ್ಲು, ತೀರ್ಥರಾಮ ನೆಡ್ಚಿಲ್,ತೀರ್ಥರಾಮ ಪರ್ನೋಜಿ, ದಿವಾಕರ ಪೈ, ಲೋಕಯ್ಯ ಅತ್ಯಾಡಿ, ಮಂಜುನಾಥ ಮಡ್ತಿಲ ಮೊದಲಾದವರಿದ್ದರು.

970×90