ಕಡಬ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ರದ್ದು lಪೆಟ್ರೋಲ್, ಡಿಸೆಲ್ ಬೆಲೆ ಇಳಿಸುವಂತೆ ಮನವಿಯಲ್ಲಿ ಆಗ್ರಹ

ಕಡಬ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ರದ್ದು lಪೆಟ್ರೋಲ್, ಡಿಸೆಲ್ ಬೆಲೆ ಇಳಿಸುವಂತೆ  ಮನವಿಯಲ್ಲಿ ಆಗ್ರಹ

ಕಡಬ ಟೈಮ್ಸ್,ಪಟ್ಟಣ ಸುದ್ದಿ:  ಕಚ್ಚಾ ತೈಲ ಬೆಲೆ ಏರಿಕೆ ವಿರುದ್ದ  ಕಡಬ ಬ್ಲಾಕ್ ಕಾಂಗ್ರೆಸ್ ಮೆರವಣಿಗೆ ನಡೆಸಿ ಪ್ರತಿಭಟನೆಗೆ ಸಿದ್ದತೆ ನಡೆಸಿತ್ತಾದರೂ, ಕೊರೋನಾ ಹಿನ್ನಲೆಯಲ್ಲಿ 144 ಸೆಕ್ಷನ್ ಹಾಕಿರುವುದರಿಂದ ಸೋಮವಾರ ಪ್ರತಿಭಟನೆಯನ್ನು ರದ್ದುಗೊಳಿಸಿ, ಕೇವಲ ಮನವಿ ನೀಡುವುದಕ್ಕೆ ಸೀಮಿತಗೊಳಿಸಲಾಗಿತ್ತು.

ಅಂತರಾಷ್ಟೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದ್ದು, ದೇಶಾದ್ಯಂತ ಪೆಟ್ರೋಲ್, ಡಿಸೆಲ್, ಬೆಲೆ ವಿಪರೀತ ಗಗನಕ್ಕೇರಿದ್ದು ಬಡ ಸಾಮಾನ್ಯ ಜನರ ಜೀವನಕ್ಕೆ ಬಹಳ ತೊಂದರೆಯಾಗಿದೆ ಎಂದು ಆರೋಪಿಸಿರುವ  ಜೂ.29ರಂದು ಕಡಬ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಕೆಗೆ ಮೊದಲು ಕಡಬ ತಹಸೀಲ್ದಾರ್ ಕಛೇರಿಯ ಎದುರುಗಡೆ ಕೆ.ಪಿ.ಸಿ.ಸಿ. ಸದಸ್ಯ ಡಾ| ರಘು ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಕೊರೋನಾ ಮಹಾಮಾರಿ ರೋಗದ ಸಮಯದಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರಿಂದ ಹಣ ಲೂಟಿ ಹೊಡೆಯುತ್ತಿದ್ದು ಕೂಡಲೇ ಪೆಟ್ರೋಲ್ ಡಿಸೆಲ್ ಬೆಲೆಯನ್ನು ಇಳಿಸಿ ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು  ಆಗ್ರಹಿಸಿದರು.ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ  ಮತ್ತು  ಜಿ,ಪಂ.ಸದಸ್ಯ ಪಿ.ಪಿ.ವರ್ಗೀಸ್  ಸಮಯೋಚಿತವಾಗಿ ಮಾತನಾಡಿದರು

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಶೀನಪ್ಪ ಗೌಡ ಬೈತಡ್ಕ, ರಾಯ್ ಅಬ್ರಹಾಂ, ಕೆ.ಪಿ.ಸಿಸಿ ಕಿಶಾನ್ ಘಟಕದ ಯತೀಶ್ ಬಾನಡ್ಕ, ಸೆಬೆಸ್ಟನ್ ಶಿರಾಡಿ, ಭವಾನಿಶಂಕರ ಗೌಡ, ವಿಶ್ವನಾಥ, ಕಾಂಗ್ರೆಸ್ ಪ್ರಮುಖರಾದ ಸತೀಶ್ ಕೆಡೆಂಜಿ, ಎಚ್.ಕೆ.ಇಲ್ಯಾಸ್, ಕಡಬ ಗ್ರಾ.ಪಂ. ಸದಸ್ಯರಾದ ಹನೀಫ್ ಕೆ.ಎಂ. ಅಶ್ರಫ್ ಶೇಡಿಗುಂಡಿ, ನೀಲಾವತಿ ಶಿವರಾಮ, ಶರೀಫ್ ಎ.ಎಸ್. ಶಾಲಿನಿ ಸತೀಶ್ ನಾಕ್, ಸತೀಶ್ ನಾಕ್. ಕೆ.ಜೆ.ತೋಮಸ್, ತೋಮಸ್ ಇಡೆಯಾಳ ಮೊದಲಾದವರು ಉಪಸ್ಥಿತರಿದ್ದರು.

970×90